Karnataka Voice

Latest Kannada News

ಮೊನ್ನೆ ಬಿವೈ ವಿಜಯೇಂದ್ರ ಜೊತೆ- ಇಂದು ಮುರಗೇಶ ನಿರಾಣಿ ಜೊತೆ: ಬಿಜೆಪಿಯಲ್ಲಿ ಹೊಸ ಮನ್ವಂತರ ಆರಂಭ…

Spread the love

ಬಾಗಲಕೋಟೆ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ದಿಢೀರ್ ಬಾಗಲಕೋಟೆ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಹಳೆ ನಗರದ ನಿವಾಸದಲ್ಲಿ ಸಂಸದ ನಾರಾಯಣಸಾ ಭಾಂಡಗೆ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡ ಯತ್ನಾಳ್ ಜೊತೆ ಕಾಣಿಸಿಕೊಂಡಿರುವುದು ವಿಶೇಷ ಗಮನ ಸೆಳೆದಿದೆ. ಈ ಹಿಂದೆ ಪರಸ್ಪರ ವಾಗ್ದಾಳಿ ನಡೆಸಿದ್ದ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಇದಕ್ಕೂ ಮುನ್ನ ಹುಬ್ಬಳ್ಳಿಯ ಛಬ್ಬಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆ ಯತ್ನಾಳ್ ಕಾಣಿಸಿಕೊಂಡಿದ್ದರು. ಇದೀಗ ಭಾಂಡಗೆ ಭೇಟಿ ಹಾಗೂ ನಿರಾಣಿ ಜೊತೆಗಿನ ಒಡನಾಟದಿಂದ ಯತ್ನಾಳ್ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಯತ್ನಾಳ್ ಮತ್ತೆ ಬಿಜೆಪಿಗೆ ಮರಳುತ್ತಾರಾ? ಸದ್ಯಕ್ಕೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಮುಂದಿನ ಬೆಳವಣಿಗೆಗಳತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.


Spread the love

Leave a Reply

Your email address will not be published. Required fields are marked *

You may have missed