ಹುಬ್ಬಳ್ಳಿ- ರೈತರೊಂದಿಗೆ “ಮಧ್ಯರಾತ್ರಿ ಸಭೆ” ಬಹುತೇಕ ಸಕ್ಸಸ್- ಗಡುವು ನೀಡಿ ಪಾದಯಾತ್ರೆ ವಾಪಾಸ್ ಬಹುತೇಕ ಫಿಕ್ಸ್….
ಹುಬ್ಬಳ್ಳಿ: ಕಬ್ಬು ಬೆಳೆಗಾರರ ಜೊತೆ ಮಧ್ಯರಾತ್ರಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಸೇರಿ ಹಲವರು ಮಾತುಕತೆ ನಡೆಸಿದ್ದು, ಬಹುತೇಕ ಸಕಾರಾತ್ಮಕವಾಗಿ ನಡೆದಿದೆ.
ಈ ಕುರಿತು ಪ್ರಲ್ಹಾದ ಜೋಶಿಯವರ ಹೇಳಿಕೆ…
ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಮಾಜಿ ಸಚಿವ ಸಿ.ಸಿ.ಪಾಟೀಲ, ಶಾಸಕರುಗಳಾದ ಎಂ.ಆರ್.ಪಾಟೀಲ, ಮಹೇಶ ಟೆಂಗಿನಕಾಯಿ ಸಭೆಯಲ್ಲಿದ್ದರು.
ಸಭೆಯಲ್ಲಿದ್ದ ಚುನ್ನಪ್ಪ ಪೂಜಾರಿ ಅವರು, ಮಾತನಾಡಿ ‘ಎಲ್ಲರೂ ಕೂಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ’ ಹೇಳಿದರು.
ಚುನ್ನಪ್ಪ ಪೂಜಾರಿ ಅವರ ಹೇಳಿಕೆ…
ಹಲವು ದಿನಗಳಿಂದ ನಡೆಯುತ್ತಿದ್ದ ಹೋರಾಟ ದಿನೇ ದಿನೇ ಸಾರ್ವಜನಿಕಗೊಂಡಿತ್ತು. ಕೇಂದ್ರ ಸಚಿವರು ಕೊನೆಗೆ ನೇರವಾಗಿ ಮಾತುಕತೆ ನಡೆಸಿದ್ದರಿಂದ ಉತ್ತಮ ವಾತಾವರಣ ಸೃಷ್ಟಿಯಾಗಿದೆ.
