Posts Slider

Karnataka Voice

Latest Kannada News

ಚಿನಗುಂಡಿ ಸರಕಾರಿ ಶಾಲೆಗೆ “TV, FAN” ಕೊಡುಗೆ ನೀಡಿದ ಇನ್ನರ್‌ವೀಲ್ ಕ್ಲಬ್…

Spread the love

ಜಮಖಂಡಿ: ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿನಗುಂಡಿಯಲ್ಲಿ ಇನ್ನರ್ ವೀಲ್ ಕ್ಲಬ್ ಬೆಂಗಳೂರು ಎಚ್‌ಬಿಆರ್ ವತಿಯಿಂದ ಶಾಲೆಗೆ TV, 4 ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಚನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ್ ಕಾಂಬಳೆ ಅವರು ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಜಿ.ಎನ್. ಕುಂಬಾರ್ ಅವರು ಸರ್ವಜ್ಞನ ವಚನದ ಮೂಲಕ ದಾನದ ಮಹತ್ವವನ್ನು ವಿವರಿಸಿ ಇನ್ನರ್ ವೀಲ್ ಕ್ಲಬ್ ನ ಈ ಸೇವಾ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಇನ್ನರ್ ವೀಲ್ಅಧ್ಯಕ್ಷರಾರಾದ ಚಂದ್ರಿಕಾ ಹೆಚ್. ಬಿ. ಆರ್. ಸಂಸ್ಥೆಯಿಂದ ಆಗಮಿಸಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದ ಇನ್ನರ್ ವೀಲ್ ನ ಸಂಸ್ಥಾಪಕ ಅಧ್ಯಕ್ಷರಾದ ವೀಣಾ ನಾವು ಈ ಸಂಸ್ಥೆಯ ವತಿಯಿಂದ ಸಣ್ಣ ಪುಟ್ಟ ಸಹಾಯಗಳನ್ನು ಮಾಡುತ್ತಾ ಬರುತ್ತಿದ್ದೇವೆ.

ಕಳೆದ ಸಾರಿ ಈ ಶಾಲೆಗೆ ಬಂದಾಗ ನಲಿಕಲಿ ಟೇಬಲ್ ˌ ಕುರ್ಚಿಗಳನ್ನು ನೀಡಿದ್ದೇವು ಈ ಸಲ ನಮ್ಮ ಹಾಗೂ ಶಾಲೆಯ ನಡುವೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಿರುವ ಪರಮಾನಂದ ಶಿಕ್ಷಕರ ಮನವಿಯ ಮೇರೆಗೆ ಒಂದು TV ಹಾಗೂ 4 ಫ್ಯಾನ್ ಗಳನ್ನು ನೀಡುತ್ತಿರುವುದು ಖುಷಿಯ ವಿಚಾರ ಎಂದರು ನಂತರ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷರಾದ ವಸುಧಾ ಅವರು ಈ ಸೇವೆಯನ್ನು ಇಲ್ಲಿ ಮಾಡಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು ನಂತರ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರಿಶಿಕ ಅವರು ನಾವು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶಂಕರ ಕಾಂಬಳೆ ಅವರು ಈ ಸಂಸ್ಥೆಯ ಸೇವಾ ಕಾರ್ಯ ಯಾವಾಗಲೂ ಸ್ಮರಣೀಯವಾದದ್ದು ನಾವು ಗ್ರಾಮ್ ಪಂಚಾಯಿತಿಯಿಂದ ಈಗಾಗಲೇ ಹಲವು ಸೌಲಭ್ಯಗಳನ್ನು ಒದಗಿಸಿದ್ದು ಮುಂದಿನ ದಿನಗಳಲ್ಲಿ ಶಾಲೆಗೆ ಹೈಟೆಕ್ ಗ್ರಂಥಾಲಯ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮನ್ನು D K ಅಮರಿ ನಿರೂಪಿಸಿದರು. ಪರಮಾನಂದ ಸ್ವಾಗತಿಸಿದರು. ಸಿದ್ಧಗಂಗು ವಂದಿಸಿದರು.
ಶಾಲೆಯ SDMC ಅಧ್ಯಕ್ಷರಾದ ಚಿಕ್ಕಯ್ಯ ಕಾಂಬಳೆˌ ಗ್ರಾ ಪಂ ಸದಸ್ಯರಾದ ರಾಮಣ್ಣ ಕಳ್ಯಾಡ್ರ ˌ SDMC ಸದಸ್ಯರಾದ ರಮೇಶ ಕಾಂಬಳೆ ˌˌರಾಮಪ್ಪ ಗುರವ ˌ ಮಾಜಿ SDMC ಸದಸ್ಯರಾದ ಶ್ರೀಶೈಲ್ ಮಠಪತಿ ˌಅಲ್ಲಾಸಾಬ್ ಪಿಂಜಾರ ಹಾಗೂ ಶಾಲೆಯ ಎಲ್ಲಾ ಗುರುಗಳು ಗುರುಮಾತೆಯರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *