ಧಾರವಾಡ ADC ವಾಹನಕ್ಕೆ ಸಿಲೆಂಡರ್ ವಾಹನ ಡಿಕ್ಕಿ- ತಪ್ಪಿದ ಬಹುದೊಡ್ಡ ದುರಂತ….
 
        ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಸಮಯದಲ್ಲಿ ಧಾರವಾಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅವರ ವಾಹನಕ್ಕೆ ಸಿಲೆಂಡರಿದ್ದ ವಾಹನವೊಂದು ಡಿಕ್ಕಿ ಹೊಡೆದ ಘಟನೆ ಹೆಬಸೂರ ಬಳಿ ಸಂಭವಿಸಿದೆ.
ವೀಡಿಯೋ…
ಗೂಡ್ಸ್ ವಾಹನದಲ್ಲಿ ತುಂಬಿದ ಸಿಲೆಂಡರ್ ಇದ್ದಿದ್ದರೇ ಬಹುದೊಡ್ಡ ಅವಘಡ ನಡೆಯುತ್ತಿತ್ತು ಎನ್ನಲಾಗಿದ್ದು, ಘಟನೆಯಲ್ಲಿ ಎಡಿಸಿ ಗೀತಾ ಸಿಡಿ ಅವರಿದ್ದ ವಾಹನ ಬಹುತೇಕ ಜಖಂಗೊಂಡಿದ್ದು, ಯಾವುದೇ ಗಾಯಗಳಾಗಿಲ್ಲ.
ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದು, ವಾಹನವನ್ಮ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
 
                       
                       
                       
                       
                      
 
                         
                 
                 
                