2ನೇ ಮದುವೆಯಾಗುತ್ತಿದ್ದ ಮಹಾಶಯನಿಗೆ ಮಂಟಪದಲ್ಲೇ “ಚಪ್ಪಲಿಯೇಟು” ಕೊಟ್ಟ ಪತ್ನಿ- ಪಾಲಕರಿಗೂ ಗೂಸಾ Exclusive Video

ಪತಿರಾಯನ ಜೊತೆಗಿದ್ದ ಪಾಲಕರಿಗೂ ಧರ್ಮದೇಟು ನೀಡಿದ ಬೀಗರು
ಎರಡನೇಯ ಮದುವೆಯಾಗಲಿದ್ದ ವಧುವಿನ ಸ್ಥಿತಿ ಅಯೋಮಯ
ಚಿತ್ರದುರ್ಗ: ಎರಡನೇ ಮದುವೆಗೆ ಹಸೆಮಣೆ ಏರಲು ಸಿದ್ಧವಾಗಿದ್ದ ಪತಿರಾಯನಿಗೆ ಮಂಟಪದಲ್ಲೇ ಮೊದಲ ಪತ್ನಿ ಚಪ್ಪಲಿ ಏಟು ಕೊಟ್ಟ ಘಟನೆ ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
Exclusive Video
ವರದಕ್ಷಿಣೆ ದುರಾಸೆಗೆ ಎರಡನೇ ಮದುವೆಯಾಗುತ್ತಿದ್ದವನಿಗೆ ಪತ್ನಿಯಿಂದಲೇ ಧರ್ಮದೇಟು ಬಿದ್ದಿದೆ. 4 ವರ್ಷದ ಹಿಂದೆ ತನುಜಾ ಎಂಬಾಕೆಯನ್ನ ಆರೋಪಿ ಕಾರ್ತಿಕ್ ಮದುವೆಯಾಗಿದ್ದ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ ತನುಜಾ, ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ್ನನ್ನು ಕೈಹಿಡಿದಿದ್ದಳು. ಆದರೂ ಕಾರ್ತಿಕ್ ಯಾರಿಗೂ ಗೊತ್ತಾಗದಂತೆ ಚಿತ್ರದುರ್ಗದಲ್ಲಿ 2ನೇ ಮದುವೆಗೆ ಪ್ಲಾನ್ ಮಾಡಿದ್ದ.
ಕಾರ್ತಿಕ್ ವರದಕ್ಷಿಣೆ ಆಸೆಗೆ ಮತ್ತೊಮ್ಮೆ ಹಸಮಣೆ ಏರಲು ಸಿದ್ಧವಾಗಿದ್ದ. ಈ ಸುದ್ದಿ ತಿಳಿದು ಮೊದಲ ಪತ್ನಿ ಕುಟುಂಬಸ್ಥರೊಂದಿಗೆ ಮಂಟಪಕ್ಕೇ ಬಂದು ಧರ್ಮದೇಟು ಕೊಟ್ಟಿದ್ದಾಳೆ. ಆ ಮೂಲಕ ಕಾರ್ತಿಕ್ ಪತ್ನಿ ತನುಜಾ ಕುಟುಂಬಸ್ಥರಿಂದ ಎರಡನೇ ಮದುವೆಗೆ ಬ್ರೇಕ್ ಬಿದ್ದಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮದುವೆಗೆ ತಯಾರಾಗಿದ್ದ ವಧುವಿನ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.