ಹುಬ್ಬಳ್ಳಿ: ಸುಜಯ ಕೊರವರ ಅಮೋಘ ಬ್ಯಾಟಿಂಗ್ “HPL” ಟ್ರೋಪಿ ಮುಡಿಗೇರಿಸಿಕೊಂಡ ‘FRD’ ತಂಡ….

ಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ಕಳೆದ ಆರು ದಿನಗಳಿಂದ ನಡೆದ HPL ಟ್ರೋಪಿಯ ಕ್ರಿಕೆಟ್ ಟೂರ್ನಿಯಲ್ಲಿ ಸುಜಯ ಬಸವರಾಜ ಕೊರವರ ಅಮೋಘ ಬ್ಯಾಟಿಂಗ್‌ನಿಂದ ಫಸ್ಟ್ ರಿನೇಗೆಡ್ಸ್ ಧಾರವಾಡ ತಂಡ ಟ್ರೋಪಿಯನ್ನ ಮುಡಿಗೇರಿಸಿಕೊಂಡಿತು.
ಟ್ರೋಪಿಯ ಫೈನಲ್ ಪಂದ್ಯದಲ್ಲಿ ವಿವಾ ಸೂಪರ್ ಕಿಂಗ್ಸ್ 30 ಓವರನಲ್ಲಿ 7 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತ್ತು. ಇದರ ಬೆನ್ನು ಬಿದ್ದ FRD ತಂಡ ಕೇವಲ 2 ವಿಕೆಟ್ ಕಳೆದುಕೊಂಡು 25.4 ಓವರ್‌ನಲ್ಲಿ ಗೆಲುವಿನ ಕೇಕೆ ಹಾಕಿತು.
ಅದ್ಭುತ್ ಬ್ಯಾಟಿಂಗ್ ಕ್ಷಣಗಳು…
FRD ತಂಡದ ಸುಜಯ 66 ಬಾಲ್‌ನಲ್ಲಿ ಔಟಾಗದೇ 97 ರನ್ ಗಳಿಸಿದರು. ಇದರಲ್ಲಿ 6 ಬಾಂಡರಿ, 7 ಸಿಕ್ಸ್‌ಗಳನ್ನ ಬಾರಿಸಿದರು. ಸುಜಯ ಕೊರವರ ಅತ್ಯಾಕರ್ಷಕ ಬ್ಯಾಟಿಂಗ್ ಮೈದಾನದಲ್ಲಿ ರಸದೌತಣ ಮೂಡಿಸಿತು.
ಸುಜಯ ಕೊರವರ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರ ಪುತ್ರ ಎಂಬುದನ್ನ ಇಲ್ಲಿ ಸ್ಮರಿಸಬಹುದಾಗಿದೆ.