“ಥ್ರೀಲಿಂಗ್ ಚೇಸ್” ಸವಾರನ ಸಾವಿಗೆ ಕಾರಣವಾಗಿದ್ದ ಡ್ರೈವರ್ ಸಮೇತ ಲಾರಿ ಎಳೆತಂದ ಇನ್ಸಪೆಕ್ಟರ್ ಶ್ರೀನಿವಾಸ ಮೇಟಿ….!!!

ಧಾರವಾಡ: ಹೊಯ್ಸಳನಗರದ ಬಳಿ ಬೈಕ್ ಸವಾರನ ಸಾವಿಗೆ ಕಾರಣವಾಗಿದ್ದ ಬೃಹದಾಕಾರದ ಲಾರಿಯನ್ನ ಸೀನಿಮಯ ರೀತಿಯಲ್ಲಿ ಚೇಸಿಂಗ್ ಮಾಡಿ ಚಾಲಕನ ಸಮೇತ ಲಾರಿಯನ್ನ ವಶಕ್ಕೆ ಪಡೆಯುವಲ್ಲಿ ಧಾರವಾಡ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ ಮೇಟಿ ಯಶಸ್ವಿಯಾಗಿದ್ದಾರೆ.
ಹೌದು… ಕೆಲವೇ ಗಂಟೆಗಳ ಹಿಂದೆ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣದ ಬಗ್ಗೆ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ಹಂಚಿಕೊಂಡಿತ್ರು. ಅದೇ ಪ್ರಕರಣದಲ್ಲಿ ಪರಾರಿಯಾಗುತ್ತಿದ್ದ ಲಾರಿಯನ್ನ ವೆಂಕಟಾಪೂರದ ಸಮೀಪ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.
ಎಕ್ಸಕ್ಲೂಸಿವ್ ವೀಡಿಯೋ…
ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿ ಅವರ ದಕ್ಷತೆಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಲಾರಿ ಸಿಕ್ಕು ಬಿದ್ದಿದೆ. ಪ್ರಕರಣವನ್ನ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.