ಹುಬ್ಬಳ್ಳಿ “ಶಹರ”ದಲ್ಲಿ ಪುಡಿ ರೌಡಿಗಳ ಅಟ್ಟಹಾಸ… ಫೀಸ್ ಫೀಸ್…!!!
Exclusive
ಹುಬ್ಬಳ್ಳಿಯಲ್ಲಿ ಅಂಗಡಿ ನುಗ್ಗಿ ಪುಡಿ ರೌಡಿಗಳ ದರ್ಪ; ಅಂಗಡಿಗೆ ನುಗ್ಗಿ ಎಲ್ಲಾ ಪೀಸ್ ಪೀಸ್
ಹುಬ್ಬಳ್ಳಿ: ಅಂಗಡಿ ಮುಂದೆ ನಿಲ್ಲಿಸಿದ್ದ ಆಟೋ ತೆಗೆ ಅಂತಾ ಹೇಳಿದಕ್ಕೆ ಐದಾರು ಪುಡಿ ರೌಡಿಗಳು ಅಂಗಡಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅಂಗಡಿಯಲ್ಲಿದ್ದ ಸಾಮಾನುಗಳನ್ನು ಪೀಸ್ ಪೀಸ್ ಮಾಡಿದ ಘಟನೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಟೌನ್ ಹಾಲ್ ಬಳಿಯಲ್ಲಿ ನಡೆದಿದೆ.
ವೀಡಿಯೋ ಲಿಂಕ್…
https://www.facebook.com/share/v/16M4SvvsP1/
ಹುಬ್ಬಳ್ಳಿಯ ಟೌನ್ ಹಾಲ್ ಎದುರುಗಡೆ ಇರುವ ಶ್ರುತಿ ಶೀಟ್ ಕವರ್ ಅಂಗಡಿ ಮುಂದೆ ರಿಕ್ಷಾ ಚಾಲಕನೊಬ್ಬ ರಿಕ್ಷಾ ನಿಲ್ಲಿಸಿದ್ದಾನೆ, ಆಗ ಅಂಗಡಿಯವರು ರಿಕ್ಷಾ ತೆಗೆಯರಿ ಇಲ್ಲಿ ವಾಹನಗಳಿಗೆ ಸೀಟ್ ಹಾಕೋದು ಇದೆ ಅಂತಾ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕ ಕೆಲವು ಪುಂಡರನ್ನು ಕರೆದುಕೊಂಡು ಬಂದು ಅಂಗಡಿಯೊಳಗೆ ನುಗ್ಗಿ ಮನಸ್ಸೋ ಇಚ್ಛೆ ಥಳಿಸಿದ್ದಾರೆ.
ಘಟನೆಯಲ್ಲಿ ಅಭಿ ಗಾಮನಗಟ್ಟಿ, ಸುಮಂತ ಹಾಗೂ ಡೇವಿಡ್ ಎಂಬುವರಿಗೆ ಗಾಯವಾಗಿದೆ. ಅಂಗಡಿ ಮುಂದಿನ ಆಟೋ ತೆಗೆ ಅಂದಿದಕ್ಕೆ ಈ ಪುಡಿ ರೌಡಿಗಳು ಅಂಗಡಿ ಒಳಗೆ ನುಗ್ಗಿ ಮನಸ್ಸೋ ಇಚ್ಛೆ ಹಲ್ಲೆ ಮಾಡ್ತಾರೆ ಅಂದ್ರೆ ಇವರಿಗೆ ಹೇಳೋರು ಕೇಳೋರು ಯಾರು ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಗಾಯಗೊಂಡ ಮೂವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪೊಲೀಸರು ಈ ಪುಂಡರ ಮೇಲೆ ಯಾವ ರೀತಿಯ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.