Posts Slider

Karnataka Voice

Latest Kannada News

“Bigg Boss” ರಿಯಾಲಿಟಿ ಶೋನಲ್ಲಿ ಇತಿಹಾಸ ಸೃಷ್ಟಿಸಿದ ಉತ್ತರಕರ್ನಾಟಕದ “ಹನಮಂತ ಲಮಾಣಿ”- 5ಕೋಟಿಗೂ ಹೆಚ್ಚು ಮತ….!!!

Spread the love

ಬಿಗ್‌ಬಾಸ್‌ ಟ್ರೋಫಿ ಗೆಲ್ಲಬೇಕು ಎಂಬುದು ಪ್ರತಿಯೊಬ್ಬ ಸ್ಪರ್ಧಿಯ ಕನಸು. ಈ ಕನಸು ನನಸು ಮಾಡಿಕೊಳ್ಳಲು ದೊಡ್ಮನೆಯಲ್ಲಿ ಸಿಕ್ಕಾಪಟ್ಟೆ ಕಷ್ಟಪಡುತ್ತಾರೆ. ಈ ವ್ಯಕ್ತಿತ್ವದ ಆಟದಲ್ಲಿ ಅಂತಿಮವಾಗಿ ಓರ್ವ ಸ್ಪರ್ಧಿ ಕಪ್ ಗೆಲ್ಲುತ್ತಾರೆ. ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ 17 ಮಂದಿ ಎಂಟ್ರಿಕೊಟ್ಟಿದ್ದರು. ಈ ಪೈಕಿ ತ್ರಿವಿಕ್ರಮ್, ಹನುಮಂತು, ಮೋಕ್ಷಿತಾ ಪೈ, ಭವ್ಯಾ ಗೌಡ, ರಜತ್ ಕಿಶನ್ ಹಾಗೂ ಉಗ್ರಂ ಮಂಜು ಫೈನಲ್ ಹಂತ ತಲುಪಿದ್ದರು. ಇದೀಗ ಬಿಗ್‌ಬಾಸ್‌ ವಿನ್ನರ್ ಹಾಗೂ ರನ್ನರ್ ಯಾರು ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

ವೀಕ್ಷಕರಿಂದ 5,23,89,31 ಮತಗಳನ್ನು ಪಡೆಯುವ ಮೂಲಕ ಹನುಮಂತ ಲಮಾಣಿ ಬಿಗ್‌ಬಾಸ್ ಕನ್ನಡ ಸೀಸನ್ 11ರ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. ಬಿಗ್‌ಬಾಸ್ ಇತಿಹಾಸದಲ್ಲಿಯೇ ಇಷ್ಟೊಂದು ವೋಟ್ ಯಾರಿಗೂ ಬಂದಿಲ್ಲ. ಈ ಬಾರಿ ವಿನ್ನರ್‌ಗೆ 5 ಕೋಟಿ ಮತಗಳು ಬಂದಿರುವುದು ಇತಿಹಾಸವಾಗಿದ್ದು, ತ್ರಿವಿಕ್ರಮ್ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದ ಹನುಮಂತ, ಬಿಗ್‌ಬಾಸ್‌ ಮನೆಯಲ್ಲಿ ಯಾವುದೇ ರೀತಿಯ ಜಗಳವಾಡದೇ, ತಮ್ಮ ಮುಗ್ಧ ಸ್ವಭಾದಿಂದಾಗಿ ವೀಕ್ಷಕರಿಗೆ ಇಷ್ಟವಾಗಿದ್ದರು. ಜೊತೆಗೆ ಕೆಲವೊಮ್ಮೆ ಊಹೆಗೂ ಮೀರಿದ ಪರ್ಫಾಮೆನ್ಸ್ ನೀಡಿದ್ದರು. ಹನುಮಂತ ಅವರ ಆಟದ ಶೈಲಿ ಕಿಚ್ಚ ಸುದೀಪ್ ಅವರಿಗೂ ಆಶ್ಚರ್ಯ ಮೂಡಿಸಿತ್ತು. ಜೊತೆಗೆ ಎಂಟರ್‌ಟೇನ್ಮೆಂಟ್ ವಿಷಯದಲ್ಲೂ ಅವರು ಮುಂದಿದ್ದರು.

ಹನಮಂತ ಲಮಾಣಿ ಬಗ್ಗೆ ವಿವರ

ಹನುಮಂತ ಲಮಾಣಿ ಮೂಲತಃ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ. ಕುರಿಗಾಹಿಯಾಗಿದ್ದ ಹನುಮಂತ, ನ್ನ ಗಾಯನದಿಂದ ಮೋಡಿ ಮಾಡಿದ್ದರು. ಯಾವುದೇ ಸಂಗೀತ ತರಬೇತಿ ಇಲ್ಲದೇ ತನ್ನ ಗಾಯನದಿಂದ ಹನುಮಂತ ಗಮನ ಸೆಳೆದಿದ್ದರು. ಬಂಜಾರ ಹಾಡುಗಳನ್ನು ಹಾಡುವುದರಲ್ಲಿ ಹನುಮಂತ ಎತ್ತಿದ್ ಕೈ.

ತನ್ನ ಮುಗ್ಧ ಸ್ವಭಾವ ಹಾಗೂ ಉತ್ತರ ಕರ್ನಾಟಕ ಭಾಗದ ಹಳ್ಳಿ ಸೊಗಡಿನ ಮಾತಿನಿಂದಲೇ ಜನಪ್ರಿಯರಾಗಿರುವ ಹನುಮಂತ ಲಮಾಣಿ 1993ರ ಅಕ್ಟೋಬರ್ 7ರಂದು ಜನಿಸಿದ್ದಾರೆ. ಇವರಿಗೆ ಈಗ 31 ವರ್ಷ ವಯಸ್ಸಾಗಿದೆ. ಇವರು ಎಸ್‌ಎಸ್‌ಎಲ್‌ಸಿವರೆಗೂ ಓದಿಕೊಂಡಿದ್ದಾರೆ ಎನ್ನಲಾಗಿದೆ.

ಯಾವುದೇ ಸಂಗೀತ ತರಬೇತಿ ಇಲ್ಲದೇ ತನ್ನ ಗಾಯನದಿಂದಲೇ ಗಮನ ಸೆಳೆದ ಹನುಮಂತ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸರಿಗಮಪ ಸೀಸನ್ 15ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇಲ್ಲಿ ಮೆಂಟರ್‌ಗಳ ಮಾರ್ಗದರ್ಶನದಿಂದ ಅವರ ಗಾಯನದಲ್ಲಿ ಮತ್ತಷ್ಟು ಪಕ್ವತೆ ಬಂದಿತ್ತು. ಈ ರಿಯಾಲಿಟಿ ಶೋನಲ್ಲಿ ಜಾನಪದ ಹಾಡುಗಳನ್ನು ಹಾಡಿ, ತನ್ನ ಕಂಠ ಮತ್ತು ಸುಮಧುರ ಗಾಯನದಿಂದ ಜನಪ್ರಿಯತೆ ಪಡೆದರು. ಜೊತೆಗೆ ಈ ಶೋನ ಮೊದಲ ರನ್ನರ್ ಅಪ್ ಕೂಡ ಆಗಿದ್ದರು.

ಸರಿಗಮಪ ಬಳಿಕ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಅಲ್ಲಿಯೂ ಉತ್ತಮ ನೃತ್ಯ ಪ್ರದರ್ಶನ ನೀಡಿದ್ದರು. ಈ ಸಂದರ್ಭ ಹನುಮಂತ ಅವರಿಗೆ ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಭಾಗವಹಿಸಲು ಆಫರ್ ನೀಡಲಾಗಿತ್ತಂತೆ. ಆದರೆ, ಡ್ಯಾನ್ಸ್ ಶೋನಲ್ಲಿ ಭಾಗವಹಿಸಿದ್ದರಿಂದ ಆಫರ್ ರಿಜೆಕ್ಟ್ ಮಾಡಿದ್ದರಂತೆ. ಇದಾದ ಬಳಿಕ ಭರ್ಜರಿ ಬ್ಯಾಚುಲರ್ಸ್, ಕಾಮಿಡಿ ಕಿಲಾಡಿಗಳು ಶೋನಲ್ಲೂ ಭಾಗವಹಿಸಿದ್ದರು.

ಲುಂಗಿ ಉಟ್ಟು ಹೆಗಲ ಮೇಲೆ ಟವೆಲ್ ಹಾಕ್ಕೊಂಡು ಸರಿಗಮಪ ವೇದಿಕೆಗೆ ಎಂಟ್ರಿಕೊಟ್ಟಿದ್ದ ಹನುಮಂತ, ಅದೇ ಲುಕ್‌ನಲ್ಲಿ ಕೊನೆಯವರೆಗೂ ಕಾಣಿಸಿಕೊಂಡಿದ್ದರು. ಬಿಗ್‌ಬಾಸ್ ವೇದಿಕೆಗೂ ಅದೇ ಲುಕ್‌ನಲ್ಲಿ ಎಂಟ್ರಿಕೊಟ್ಟಿದ್ದರು. ಆದರೆ, ದೊಡ್ಮನೆಯಲ್ಲಿನ ಹನುಮಂತನ ಕೆಲ ವರ್ತನೆ ವೀಕ್ಷಕರಿಗೆ ಇವರು ನಿಜವಾಗಿಯೂ ಮುಗ್ಧನಾ ಎಂಬ ಹನುಮಾನ ಮೂಡಿಸಿತ್ತು. ಯಾಕೆಂದರೆ, ಹನುಮಂತ ನನಗೆ ವೆಸ್ಟರ್ನ್ ಟಾಯ್ಲೆಟ್ ಗೊತ್ತಿಲ್ಲ. ಇದನ್ನು ಹೇಗೆ ಬಳಸೋದು ಅಂತ ಕೇಳಿದ್ದ. ಇದಕ್ಕೆ ನೆಟ್ಟಿಗರು ‘ದೊಡ್ಡ ದೊಡ್ಡ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ದೊಡ್ಡ ನಗರಗಳಿಗೆ ಹೋಗಿದ್ದಾರೆ. ವೆಸ್ಟರ್ನ್ ಟಾಯ್ಲೆಟ್ ಗೊತ್ತಿಲ್ವಾ? ಅಂತ ಪ್ರಶ್ನಿಸುತ್ತಿದ್ದರು.


Spread the love

Leave a Reply

Your email address will not be published. Required fields are marked *