ಹುಬ್ಬಳ್ಳಿ: “ಯೂನಿವರ್ಸಿಟಿ ಬ್ಲೂ” ನಾಗಾರ್ಜುನ ಶಂಕರ ಪಾಟೀಲಮುನೇನಕೊಪ್ಪ…!!!
ಆಲ್ ಇಂಡಿಯಾ ಯೂನಿವರ್ಸಿಟಿ ಟೂರ್ನಿಯಲ್ಲಿ ಕರ್ನಾಟಕ ಯೂನಿವರ್ಸಿಟಿ ಪ್ರತಿನಿಧಿಸಲಿರುವ ಸಾಧಕ ಪಟುಗಳು
ಹುಬ್ಬಳ್ಳಿ: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಕ್ರಿಕೆಟ್ ಟೀಂನಲ್ಲಿ ನಗರದ ಆಕ್ಸ್‌ಫರ್ಡ್ ಕಾಲೇಜಿನ ಐವರು ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ನಾಗಾರ್ಜುನ ಶಂಕರ ಪಾಟೀಲಮುನೇನಕೊಪ್ಪ, ಶರಣ ಡಾಂಗಿ, ವಿರಾಜ ಹಾವೇರಿ, ವಿನಿತಸಿಂಗ್ ಪಜರೇ, ಅಧ್ವಿತ್ ಖಾನೋಜಿ ಆಯ್ಕೆಯಾಗಿದ್ದು, ಕ್ರಿಕೆಟ್ ವಲಯದಲ್ಲಿ ಸಾಧನೆಯಾಗಿದೆ.
ನಾಗಾರ್ಜುನ ಸೇರಿದಂತೆ ಐವರು ಕ್ರಿಕೆಟ್ ಆಟಗಾರರು ಚಾಂಪಿಯನ್ಸ್ ನೆಟ್‌ನಲ್ಲಿ ಕೋಚಿಂಗ್ ಪಡೆದಿದ್ದು, ಗಮನಾರ್ಹವಾಗಿದೆ. ಆಕ್ಸ್‌ಫರ್ಡ್ ಕಾಲೇಜಿನ ಇತಿಹಾಸದಲ್ಲಿ ಮೊದಲ ಬಾರಿಗೆ ಐವರು ಆಟಗಾರರು ‘ಯೂವಿವರ್ಸಿಟಿ ಬ್ಲೂ’ ಆಗಿ ಹೊರಹೊಮ್ಮಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್‌ನಲ್ಲಿ ಸಾಧನೆ ಮಾಡುತ್ತ ಹೊರಟಿರುವ ನಾಗಾರ್ಜುನ, ಇದೀಗ ಯೂನಿವರ್ಸಿಟಿ ಬ್ಲೂ ಆಗುವ ಮೂಲಕ ಹೊಸ ಹಾದಿಯನ್ನ ತುಳಿದಿರುವುದು ಗಮನಾರ್ಹವಾಗಿದೆ.