ಹುಬ್ಬಳ್ಳಿ: ನವನಗರದ ವಿಜಯಕುಮಾರ ಅಪ್ಪಾಜಿ ಬಂಧನ- Big Impact…
ಹುಬ್ಬಳ್ಳಿ: ಮಗನ ಕಟಿಂಗ್ ಸರಿ ಮಾಡಿಲ್ಲವೆಂದು ಸಲೂನ್‌ಗೆ ನುಗ್ಗಿದ್ದ ವಿಜಯಕುಮಾರ ಅಪ್ಪಾಜಿ, ಮನಬಂದಂತೆ ಮೂವರನ್ನ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದರು.
ಈ ಬಗ್ಗೆ ವೈರಲ್ ಆಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಕರ್ನಾಟಕವಾಯ್ಸ್.ಕಾಂ ನಿನ್ನೆ ಹೊರ ಹಾಕಿತ್ತು. ಘಟನೆ ಮತ್ತು ಬಂಧನದ ಕುರಿತು ಪೊಲೀಸ್ ಕಮೀಷನರ್ ಹೇಳಿಕೆ ಇಲ್ಲಿದೆ ನೋಡಿ…
ವಿಜಯಕುಮಾರ ಅಪ್ಪಾಜಿ ಹಾಗೂ ಗಣೇಶ ಎಂಬುವವರನ್ನ ಬಂಧನ ಮಾಡಲಾಗಿದೆ. ಹೊತ್ತಿನ ಊಟಕ್ಕೆ ಬಂದವರ ಮೇಲೆ ಪೌರುಷ ತೋರಿಸಿ, ಪ್ರಮುಖರೊಂದಿಗೆ ಪೋಟೊ ತೆಗೆಸಿಕೊಳ್ಳುವ ಇಂಥಹ ಮಾನವರಲ್ಲದ ಮನಸ್ಥಿತಿಯವರಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕಿದೆ.