ಹುಬ್ಬಳ್ಳಿಯ “ರೇಲ್ವೆ ನಿಲ್ದಾಣ”ದಲ್ಲಿ ತಪ್ಪಿದ ಬಹುದೊಡ್ಡ ಅವಘಡ… ಮೂವರು ಅಮಾನತ್ತು… ಬದುಕುಳಿದ ಇಬ್ಬರು… Exclusive
1 min readಹುಬ್ಬಳ್ಳಿ: ರೇಲ್ವೆ ನಿಲ್ದಾಣದಲ್ಲಿ ಬಹುದೊಡ್ಡ ಅನಾಹುತವೊಂದು ತಪ್ಪಿದ್ದು, ರೇಲ್ವೆ ಪ್ಲಾಟಫಾರ್ಮ್‌ಗೆ ವಿದ್ಯುತ್ ಚಾಲಿತ ವಾಹನ ಉರುಳಿ ಬಿದ್ದು ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರಿಂದ ಹಲವರು ಅಮಾನತ್ತುಗೊಂಡಿದ್ದಾರೆ.
ಒಂದನೇ ಪ್ಲಾಟ್ ಫಾರ್ಮ್ ನಿಂದ ಆರನೇ ಪ್ಲಾಟಫಾರ್ಮ್‌ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವಾಗ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗೂಳಪ್ಪ ಹಾಗೂ ಗೋಪಾಲ್ ದೇಶಪಾಂಡೆ ಎಂಬುವವರು ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ರೇಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೇಲ್ವೆ ನಿಲ್ದಾಣದಲ್ಲಿ ಅವಘಡ ಸಂಭವಿಸಿದ ಹಿನ್ನೆಲೆ ಚಾಲಕನ ವಿರುದ್ದ ರೇಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೇಲ್ವೆ ಅಧಿಕಾರಿಗಳ ಕರ್ತವ್ಯ ಲೋಪ ಹಿನ್ನಲೆಯಲ್ಲಿ ಟಿಕೆಟ್ ಪರಿವೀಕ್ಷಕ ನಜೀರ್, ರೇಲ್ವೆ ನಿಲ್ದಾಣದ ಉಪ ವ್ಯವಸ್ಥಾಪಕ ಇಸ್ರೇಲ್ ಅಮಾನತ್ತು ಮಾಡಲಾಗಿದೆ.
ಇದರೊಂದಿಗೆ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯನ್ನ ಅಮಾನತ್ತು ಮಾಡಲಾಗಿದೆ.