T-20 ಸೆಮಿಪೈನಲ್ನಲ್ಲಿ ಮುಗ್ಗರಿಸಿದ ಅಫ್ಘಾನಿಸ್ತಾನ- ಮೊದಲ ಬಾರಿಗೆ ಪೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ…!!!
1 min read59 ರನ್ಗೆ ಎಲ್ಲ ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ
8.5 ಓವರ್ನಲ್ಲಿ ಗೆಲುವಿನ ಗಡಿ ದಾಡಿದ ದಕ್ಷಿಣ ಆಫ್ರಿಕಾ
ಟರೌಬ: ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಮುಗ್ಗರಿಸಿದ್ದು, ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಅಫ್ಘಾನಿಸ್ತಾನ ತಂಡವೂ ಲೀಗ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಹಾಗೂ ಸೂಪರ್ ಎಂಟರಲ್ಲಿ ಆಸ್ಟ್ರೇಲಿಯಾ ತಂಡವನ್ನ ಮಣಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆದ ಪಂದ್ಯದಲ್ಲಿ ಕುತೂಹಲ ಕಾಣುವ ನಿರೀಕ್ಷೆಯಿತ್ತು.
ಪಂದ್ಯ ಆರಂಭವಾಗುತ್ತಿದ್ದ ಹಾಗೇ ಪ್ರಬಲ ಬಾಲಿಂಗ್ ದಾಳಿಗೆ ತುತ್ತಾದ ಅಫ್ಘಾನಿಸ್ತಾನ 11.5 ಓವರ್ಗಳಲ್ಲಿ ತನ್ನ ಎಲ್ಲ ವಿಕೆಟ್ಗಳನ್ನ ಕಳೆದುಕೊಂಡು ಕೇವಲ 59 ರನ್ ಗಳಿಸಿತ್ತು. ಈ ಮೊತ್ತವನ್ನ ದಕ್ಷಿಣ ಆಫ್ರಿಕಾ ಒಂದೇ ಒಂದು ವಿಕೆಟ್ ಕಳೆದುಕೊಂಡು 8.5 ಓವರ್ನಲ್ಲೇ 60 ರನ್ ಗಳಿಸಿ, ಗೆಲುವಿನ ಕೇಕೆ ಹಾಕಿತು.