“ಅಕ್ರಮ ಬಂಧನ” ಸಿಡಿದೆದ್ದ ಸತಿ: ಹೊರಬಿಟ್ಟ ಪೊಲೀಸರು: ಹಳೇಹುಬ್ಬಳ್ಳಿ ಹೊರ ಠಾಣೆ ಮುಂದಿನ ವೀಡಿಯೋ ವೈರಲ್…!!!

ಹುಬ್ಬಳ್ಳಿ: ತನ್ನ ಪತಿಯನ್ನ ಪೊಲೀಸರು ಅಕ್ರಮವಾಗಿ ತಂದು ಕೂಡಿಟ್ಟಿದ್ದಾರೆಂದು ಆರೋಪಿಸಿದ ಮಹಿಳೆಯೋರ್ವಳು ತನ್ನ ಗಂಡನನ್ನ ಹೊರಗೆ ಕಳಿಸಿರುವ ವೀಡಿಯೋ ವೈರಲ್ ಆಗಿದ್ದು, ಕಾನೂನು ಪಾಲನೆ ಮಾಡುವವರಿಂದ ಇಂತಹ ಅವಘಡಗಳು ಸಂಭವಿಸುತ್ತಿರುವುದು ಸೋಜಿಗ ಮೂಡಿಸುತ್ತಿದೆ.
ಹೌದು… ಗಲಾಟೆ ಮಾಡಿದ್ದಾರೆಂಬ ಕಾರಣಕ್ಕೆ ಪೊಲೀಸ್ ಠಾಣೆಯಿಂದ ಹೊರ ಠಾಣೆಯಲ್ಲಿಟ್ಟ ವ್ಯಕ್ತಿಯೋರ್ವನ ಪತ್ನಿ, ಆಕ್ರೋಶದಿಂದ ಮಾತನಾಡಿರುವ ವೈರಲ್ ಆಗಿರುವ ವೀಡಿಯೋ ಇಲ್ಲಿದೆ ನೋಡಿ…
ಅಕ್ರಮವಾಗಿ ಹೊರಠಾಣೆಯಲ್ಲಿಟ್ಟು ಗೊಂದಲಕ್ಕೆ ಬಿದ್ದಿರುವ ಪ್ರಕರಣ ಮೇಲಾಧಿಕಾರಿಗಳ ಗಮನಕ್ಕೆ ಈಗಾಗಲೇ ಬಂದಿದ್ದು, ಪ್ರಕರಣವನ್ನ “ಕಾಂಪ್ರೂ” ಮಾಡಿದ್ದಾರೆಂದು ಹೇಳಲಾಗುತ್ತಿದೆ. ದಕ್ಷ ಅಧಿಕಾರಿ ಸುರೇಶ ಯಳ್ಳೂರ ಅವರ ಗಮನಕ್ಕೆ ಬಾರದೇ ಈ ಘಟನೆ ನಡೆದಿರಬಹುದೆಂದು ಹೇಳಲಾಗಿದೆ.