BVBಯಲ್ಲಿ ಹತ್ಯೆಯಾಗಿದ್ದು ಕಾಂಗ್ರೆಸ್ ಪಾಲಿಕೆ ಸದಸ್ಯನ ಮಗಳು ನೇಹಾ ಹಿರೇಮಠ….

ಹುಬ್ಬಳ್ಳಿ: ಮಾಸ್ಕ್ ಹಾಕಿಕೊಂಡು ಬಂದು ಚಾಕುವಿನಿಂದ ಇರಿದ ಪ್ರಕರಣದಲ್ಲಿ ಹತ್ಯೆಯಾದ ವಿದ್ಯಾರ್ಥಿನಿಯು ನೇಹಾ ಹಿರೇಮಠ ಎಂದು ಗೊತ್ತಾಗಿದ್ದು, ಆಕೆ ಕಾಂಗ್ರೆಸ್ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಮಗಳು ಎಂದು ಗೊತ್ತಾಗಿದೆ.
24 ವರ್ಷದ ನೇಹಾ ಹಿರೇಮಠ ಎಂಸಿಎ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ತೀವ್ರವಾದ ರಕ್ತಸ್ರಾವದಿಂದ ಸಾವಿಗೀಡಾಗಿದ್ದಾಳೆ.
ಕಿಮ್ಸನ ಮುಂಭಾಗದಲ್ಲಿ ಜನ ಸೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಾಕುವಿನಿಂದ ಇರಿದಿರುವ ಹಿನ್ನೆಲೆ ಏನಿರಬಹುದೆಂದು ಇನ್ನು ತಿಳಿದು ಬಂದಿಲ್ಲ.
ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.