MP ಟಿಕೆಟ್ ವಂಚಿತ “ಲಕ್ಷ್ಮೀ ಹೆಬ್ಬಾಳ್ಕರ” ಅಳಿಯ “ರಜತ” ನಿವಾಸದಲ್ಲಿ ದಿಂಗಾಲೇಶ್ವರ ಶ್ರೀ…!!!

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರದ ಆಕಾಂಕ್ಷಿಯಾಗಿದ್ದ ರಜತ ಉಳ್ಳಾಗಡ್ಡಿಮಠ ಅವರ ನಿವಾಸಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೀಳಿಯಲು ಸಜ್ಜಾಗಿರುವ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿದ್ದರು.
ಕಾಂಗ್ರೆಸ್ ಯುವ ನಾಯಕ ರಜತ ಉಳ್ಳಾಗಡ್ಡಿಮಠ ಅವರ ಗುರುವಿನ ಸ್ಥಾನದ ಮಠದಿಂದ ಬಂದಿದ್ದ ಶ್ರೀಗಳು ನೀಡಿದ ಹೇಳಿಕೆ ಇಲ್ಲಿದೆ.
ಶ್ರೀಗಳು ಎಲ್ಲಿ ಹೋದರೂ ಚರ್ಚೆಗೆ ಕಾರಣವಾಗುತ್ತಿದೆ. ಚುನಾವಣಾ ಅಖಾಡಾ ದಿನೇ ದಿನೇ ಬಿಸಿಯಾಗುತ್ತಿದ್ದು, ಮತದಾರ ಮಾತ್ರ ಧಗೆಯಲ್ಲಿ ಬೇಯುತ್ತಿದ್ದಾನೆ.