ಮನಸೂರಿನಲ್ಲಿ ಚಿರತೆಯ “ಡೆಡ್ಲಿ ಅಟ್ಯಾಕ್” ಪುಣ್ಯಕೋಟಿ ಇನ್ನಿಲ್ಲ…!!!
1 min readಧಾರವಾಡ: ಕಳೆದ ಹಲವು ದಿನಗಳಿಂದ ಧಾರವಾಡ ಸುತ್ತಮುತ್ತ ಕಂಡು ಬಂದಿದ್ದ ಚಿರತೆಯೊಂದು ಹಸುವನ್ನ ಕೊಂದು ಹೋಗಿರುವ ಪ್ರಕರಣ ಮನಸೂರ ಗ್ರಾಮದಲ್ಲಿ ಸಂಭವಿಸಿದ್ದು, ಜನರು ತಲ್ಲಣಗೊಂಡಿದ್ದಾರೆ.
ಕುಬೇರಪ್ಪ ಮಡಿವಾಳರ ಎಂಬುವವರಿಗೆ ಸೇರಿದ ಹೊಲದಲ್ಲಿನ ಶೆಡ್‌ನಲ್ಲಿ ದುರ್ಘಟನೆ ನಡೆದಿದೆ. ಬೆಳಗಿನ ಜಾವ ಮೂರರಿಂದ ಮೂರುವರೆಗೆ ಘಟನೆ ನಡೆದಿದೆ ಎಂದು ಕುಬೇರಪ್ಪ ಹೇಳಿಕೊಂಡಿದ್ದಾರೆ.
ಚಿರತೆಯಿಂದ ಹತವಾದ ಆಕಳಿನ ಪಕ್ಕದಲ್ಲಿನ ಮಾಲೀಕ ಕುಬೇರಪ್ಪ ಮಲಗಿದ್ದ. ಆದರೆ, ಬೆಳಿಗ್ಗೆ ಅತಿಯಾದ ಝಳ ಆಗಿದ್ದರಿಂದ ಜಾಗ ಬದಲಿಸಿ, ಮಲಗಲು ಹೋಗಿದ್ದ. ಆಕಳಿನ ಶಬ್ಧ ಕೇಳಿದಾಗ ಇವರು ಜೋರಾಗಿ ಚೀರಾಡಿದ್ದಾರೆ. ಆಗ ಚಿರತೆ ಓಡಿ ಹೋಗಿದೆ ಎಂದು ಹೇಳಿಕೊಂಡಿದ್ದಾರೆ.
ಘಟನೆಯ ಬಗ್ಗೆ ಪರಿಶೀಲನೆ ನಡೆಸಲು ಅರಣ್ಯ ಅಧಿಕಾರಿಗಳು ಮನಸೂರಿಗೆ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ಘಟನೆಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.