ಬೆಳ್ಳಂಬೆಳಿಗ್ಗೆ “ಕಸಬರಿಗೆ” ಹಿಡಿದು “ಸ್ವಚ್ಚತೆ”ಗೆ ನಿಂತ ಕೇಂದ್ರ ಸಚಿವ ‘ಪ್ರಲ್ಹಾದ ಜೋಶಿ’…
1 min readಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸುತ್ತಮುತ್ತಲಿನ ಪರಿಸರವನ್ನ ಸುಂದರವಾಗಿಡಬೇಕೆಂಬ ಕಲ್ಪನೆಯ ಸ್ವಚ್ಚ ಹುಬ್ಬಳ್ಳಿ ಅಭಿಯಾನದಲ್ಲಿ ಭಾಗವಹಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಚಿವರು ಬರೆದುಕೊಂಡಿದ್ದು ಹೀಗಿದೆ ನೋಡಿ..
“ಸ್ವಚ್ಛ ಹುಬ್ಬಳ್ಳಿ – ಸ್ವಚ್ಛ ಭಾರತ”
ಇಂದು ಹುಬ್ಬಳ್ಳಿಯಲ್ಲಿ ಡಾ.ಶ್ರೀ ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ನಡೆದ ನಗರ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದೆನು.
ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ ಎಂಬ ಪರಿಕಲ್ಪನೆಯಂತೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನಕ್ಕೆ ಈ ಹಿಂದೆ ಚಾಲನೆ ನೀಡಿದ್ದು, ದೇಶಾದ್ಯಂತ ಜನರು ಸ್ವಯಂಪ್ರೇರಿತರಾಗಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಭಿನಂದನಾರ್ಹ.
ಇಂದು ಹುಬ್ಬಳ್ಳಿಯಲ್ಲಿ ನಡೆದ ಈ ವಿಶೇಷ ಅಭಿಯಾನದಲ್ಲಿ 15,000 ಕ್ಕೂ ಹೆಚ್ಚು ಕಾರ್ಯಕರ್ತರು ನಗರದ ಸ್ವಚ್ಚತೆಗೆ ಶ್ರಮಿಸಿದರು.
ಇಂದಿನ ಈ ಸ್ವಚ್ಚತಾ ಕಾರ್ಯದಲ್ಲಿ ಶಾಸಕ ಮಿತ್ರರಾದ ಶ್ರೀ Arvind Bellad , ಶ್ರೀ Mahesh Tenginkai , ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ವೀಣಾ ಬರದ್ವಾಢ, ಪಾಲಿಕೆಯ ಸದಸ್ಯರು, ಸಂಸ್ಥೆಯ ಪ್ರಮುಖರು ಜೊತೆಗಿದ್ದರು.
Narendra Modi
Bharatiya Janata Party (BJP)
BJP Karnataka
#SwachhBharat
#HealthyDharwad
#DharwadMPConstituency
#MPDharwad