Posts Slider

Karnataka Voice

Latest Kannada News

ಶೆಟ್ಟರ್ ರಾಜೀನಾಮೆ ನೀಡಿದ “MLC” ಸ್ಥಾನ “ವಿನೋದ ಅಸೂಟಿ”ಗೆ- ನಿಷ್ಠಾವಂತರ ಆಗ್ರಹ…!!!

1 min read
Spread the love

ಧಾರವಾಡ: ಕ್ಷಿಪ್ರ ರಾಜಕೀಯ ಬದಲಾವಣೆಯಲ್ಲಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಜಗದೀಶ ಶೆಟ್ಟರ್ ಕಾಂಗ್ರೆಸ್ ತೊರೆದಿದ್ದು, ಆ ಸ್ಥಾನವನ್ನ ಧಾರವಾಡ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಅವರಿಗೆ ನೀಡುವಂತೆ ನವಲಗುಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿರುವ ಕಾರ್ಯಕರ್ತರು, ವಿನೋದ ಅಸೂಟಿ ಅವರು ಪಕ್ಷವನ್ನ ಜನ್ಮ ನೀಡಿದ ಪಾಲಕರಂತೆ ನೋಡಿಕೊಂಡಿದ್ದಾರೆ. ಅವರಂತವರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವಿನೋದ ಅಸೂಟಿ ಅವರು ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಇಂಥವರನ್ನ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ನಿಷ್ಠಾವಂತ ನಾಯಕರನ್ನ ಬೆಳೆಸಬೇಕೆಂದು ಕೋರಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed