Posts Slider

Karnataka Voice

Latest Kannada News

ಹುಬ್ಬಳ್ಳಿ: “ಪುಷ್ಪ್” ಸ್ಟೈಲ್‌- ಆಯಿಲ್ ಟ್ಯಾಂಕರ್‌ನಲ್ಲಿ ’50 ಲಕ್ಷದ’ ಅಕ್ರಮ ಮದ್ಯ ರೇಡ್…!!!

1 min read
Spread the love

ಹುಬ್ಬಳ್ಳಿ: ದೇಶದಲ್ಲಿ ಜನಪ್ರಿಯವಾಗಿದ್ದ ಪುಷ್ಪ ಸಿನೇಮಾದಲ್ಲಿ ಟ್ಯಾಂಕರ್ ಮೂಲಕ ಶ್ರೀಗಂಧದ ಕಳ್ಳ ಸಾಗಣೆ ಮಾಡುವ ರೀತಿಯಲ್ಲಿಯೇ ಆಯಿಲ್ ಟ್ಯಾಂಕರ್‌ನಲ್ಲಿ ಅಕ್ರಮ ನಕಲಿ ಮದ್ಯ ಸಾಗಾಟವನ್ನ ಪತ್ತೆ ಹಚ್ಚುವಲ್ಲಿ ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಭರ್ಜರಿ ಕಾರ್ಯಾಚರಣೆಯು ನರೇಂದ್ರ ಟೋಲ್ ಬಳಿ ನಡೆದಿದ್ದು, ಅದರಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಮಧ್ಯ ಜಪ್ತಿ ಮಾಡಲಾಗಿದೆ.

ಎಕ್ಸಕ್ಲೂಸಿವ್ ವೀಡಿಯೋ…

ಬೆಂಗಳೂರಿನಿಂದ ರಾಜಸ್ತಾನದ ಉದಯಪುರಕ್ಕೆ ಹೊರಟಿದ್ದ ಟ್ಯಾಂಕರ್ ಲಾರಿಯನ್ನ ಅಧಿಕಾರಿಗಳು ತಪಾಸಣೆ ಮಾಡಿದಾಗ, ನಕಲಿ‌ ಜಿಎಸ್ಟಿ ಬಿಲ್ ಬಳಸಿ‌ ಅಕ್ರಮ‌ ನಕಲಿ ಮದ್ಯ ಸಾಗಾಟ ಮಾಡುತ್ತಿದ್ದದ್ದು ಕಂಡು ಬಂದಿದೆ.
ಟ್ಯಾಂಕರ್ ಪರಿಶೀಲನೆ ಮಾಡುವ ವೇಳೆ ಚಾಲಕ ಪರಾರಿಯಾಗಿದ್ದು, ವಾಣಿಜ್ಯ ತೆರಿಗೆ ಸಹಾಯಕ‌ ಆಯುಕ್ತ ವಿಜಯ ಕುಮಾರ್ ಸನದಿ‌ ಉಪ ಆಯುಕ್ತ ಬಾಳಪ್ಪ ಸಂಪಗಾಂವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.


Spread the love

Leave a Reply

Your email address will not be published. Required fields are marked *

You may have missed