BEO ಸರ್, ನೀವೂ ಮಾಡಿರೋ ಆದೇಶ ಪಾಲಿಸೋಕೆ ಆಗತ್ತಾ…!?
1 min readಹುಬ್ಬಳ್ಳಿ: ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆ ಆಚರಿಸುವ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಯವರು ಹೊರಡಿಸಿರುವ ಆದೇಶ ಗೊಂದಲ ಸೃಷ್ಠಿ ಮಾಡಿದೆ.
ಬೆಳಿಗ್ಗೆ ಹತ್ತು ಗಂಟೆಗೆ ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆದೇಶ ಹೊರಡಿಸಿದ್ದಾರೆ. ಆದರೆ, ಇದೇ ಆದೇಶದಲ್ಲಿ ವಿದ್ಯಾರ್ಥಿಗಳ ಜೊತೆ ಶಿಕ್ಷಕರ ದಿನವನ್ನ ಆಚರಣೆ ಮಾಡಿ, ಬಿಸಿಯೂಟ ವಿತರಿಸಿ ಬರುವಂತೆಯೂ ಮಾಹಿತಿಯಿದೆ.
ಈ ಬಗ್ಗೆ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ದೂರದ ಮಲ್ಲಿಗವಾಡ, ಇಂಗಳಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕ ಸಮೂಹಕ್ಕೆ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಆದೇಶವನ್ನ ಮಾರ್ಪಡಿಸುವ ಜೊತೆಗೆ ಎಲ್ಲ ಶಿಕ್ಷಕ ಸಮೂಹ ಶಿಕ್ಷಕರ ದಿನವನ್ನ ವಿಜೃಂಭಣೆಯಿಂದ ಆಚರಿಸುವಂತೆ ಮಾಡುವುದು ಬಿಇಓ ಉಮೇಶ ಬೊಮ್ಮಕ್ಕನವರ ಹತ್ತಿರವಿದೆ. ಅವರೇನು ಮಾಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.