ಹುಬ್ಬಳ್ಳಿಯಲ್ಲಿ “ಜನನಿಬೀಡ” ರಸ್ತೆಯಲ್ಲೇ ಸರಣಿ ಅಪಘಾತ…

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿ ವೇಗವಾಗಿ ಬಂದ ಅಂಚೆ ಇಲಾಖೆಯ ವಾಹನದಿಂದ ಸರಣಿ ಅಪಘಾತ ನಡೆದಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಡೆಯಿಂದ ಬರುತ್ತಿದ್ದ ಅಂಚೆ ಇಲಾಖೆಯ ವಾಹನ ಜಾನುವಾರುಗೆ ಡಿಕ್ಕಿ ಹೊಡೆದಿದ್ದು, ತದನಂತರ ಬೈಕ್ ಮತ್ತು ಆಟೋಗೆ ಡಿಕ್ಕಿ ಹೊಡೆದಿದೆ.
ಸರಣಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಜಾನುವಾರು ಸಾವನ್ನಪ್ಪಿದೆ. ಪ್ರಕರಣದ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.