ಸರ್ವೀಸ್ ರಿವಾಲ್ವರನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ “ಡಿಐಜಿ”..
1 min read2009 ರ ಬ್ಯಾಚಿನ ಅಧಿಕಾರಿ
ರೇಸ್ಕೋರ್ಸ್ನಲ್ಲಿ ವಾಕಿಂಗ್ ಮಾಡಿ ಬಂದು ಆತ್ಮಹತ್ಯೆ
ಕೊಯಮತ್ತೂರು: ತಮಿಳುನಾಡು ಕೊಯಮತ್ತೂರು ವಲಯದ ಪೊಲೀಸ್ ಉಪಮಹಾನಿರೀಕ್ಷಕರು ತಮ್ಮ ಕ್ವಾರ್ಟರ್ನಲ್ಲಿ ಸರ್ವೀಸ್ ರಿವಾಲ್ವರನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
2009 ರ ಬ್ಯಾಚಿನ 45 ವಯಸ್ಸಿನ ಸಿ.ವಿಜಯಕುಮಾರ ಎಂಬ ಡಿಐಜಿಯವರೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೀವ್ರ ಖಿನ್ನತೆಯೇ ಸಾವಿಗೆ ಕಾರಣವೆಂದು ಹೇಳಲಾಗಿದೆಯಾದರೂ, ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲು ಇಲಾಖೆ ಮುಂದಾಗಿದೆ.
ಜನೇವರಿ 6 ರಂದು ಕೊಯಮತ್ತೂರು ಡಿಐಜಿಯಾಗಿ ಅಧಿಕಾರ ವಹಿಸಿಕೊಂಡಿದ್ದ ವಿಜಯಕುಮಾರ ಅವರು, ಕಾಂಚಿಪುರಂ, ಕಡಲೂರು, ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದರು. ಕೊಯಮತ್ತೂರಿಗೆ ವರ್ಗಾವಣೆ ಆಗುವ ಮುನ್ನ ಚೆನೈ ನಗರದ ಉಪ ಪೊಲೀಸ್ ಆಯುಕ್ತರಾಗಿದ್ದರು.