ಲೀಡರ್‌ಗೆ ರೊಕ್ಕಾ ಕೊಟ್ಟ್ ಬಂದ್ ವಸೂಲಿ ಮಾಡಾಕ್ ಹಚ್ತಾರ್- ಪೊಲೀಸ್ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ…
1 min readಕಾಂಗ್ರೆಸ್ ಸರಕಾರ ಬಂದ ಮೇಲೆ ಪೊಲೀಸ್ ಇಲಾಖೆಯ ಬಣ್ಣ ಬಯಲು
ತಮ್ಮದೇ ಇಲಾಖೆಯ ಅಧಿಕಾರಿಗಳು ವಸೂಲಿಗೆ ಹಚ್ತಾರೆ ಎಂದ ಪೊಲೀಸ್
ಕಲಬುರಗಿ: ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನಸ್ಟೇಬಲ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದು, ತಮಗೆ ಮೇಲಾಧಿಕಾರಿಗಳು ಹಪ್ತಾ ವಸೂಲಿ ಮಾಡಲು ಹಚ್ಚುತ್ತಾರೆ ಎಂದಿದ್ದಾರ.
ಲೀಡರ್‌ಗಳಿಗೆ ದುಡ್ಡು ಕೊಟ್ಟು ಬರ್ತಾರೆ. ಮರಳು ಹಪ್ತಾ, ವೈನ್ ಶಾಪ್ ಹಪ್ತಾ ವಸೂಲಿ ಮಾಡಿಸ್ತಾರೆ. ಪಿಎಸ್ಐ, ಸಿಪಿಐ, ಡಿ ಎಸ್ಪಿ ಹಪ್ತಾ ವಸೂಲಿ ಮಾಡಿಸ್ತಾರೆ ಎಂದು ಬ್ರಹ್ಮಾಂಡ ಭ್ರಷ್ಟಾಚಾರವನ್ನು ಹೊರ ಹಾಕಿದ್ದಾನೆ.
ಪೊಲೀಸ್‌ನ ವೀಡಿಯೋ ಇಲ್ಲಿದೆ ನೋಡಿ…
ಹಲವು ಅಧಿಕಾರಿಗಳು ಅನೇಕ ವರ್ಷಗಳಿಂದ ಒಂದೇ ಕಡೆ ಇದ್ದಾರೆ. ಅವರನ್ನು ಕಿತ್ತು ಹಾಕೋವರೆಗೆ ವ್ಯವಸ್ಥೆ ಸುಧಾರಣೆಯಾಗಲ್ಲಾ. ಮೇಲಾಧಿಕಾರಿಗಳ ವಿರುದ್ಧ ಭೀಮಾನಾಯ್ಕ್ ಎಂಬ ಕಾನಸ್ಟೇಬಲ್ ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಂದಡೆ ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಯತ್ನ. ಆತ್ಮಹತ್ಯೆ ಗೆ ಯತ್ನಿಸಿದ ಕಾನಸ್ಟೇಬಲ್ ಚಂದ್ರಕಾಂತ್
ಕಲಬುರಗಿ ನಗರದ ಸಂಚಾರಿ ಠಾಣೆ 1 ರಲ್ಲಿ ಕಾನಸ್ಟೇಬಲ್ ಆಗಿರೋ ಚಂದ್ರಕಾಂತ್
ಚಂದ್ರಕಾಂತ ನನ್ನು ಫರಹತಾಬಾದ್ ಠಾಣೆಗೆ ವರ್ಗಾವಣೆ ಮಾಡಿರೋ ನಗರ ಪೊಲೀಸ್ ಆಯುಕ್ತ ಚೇತನ್ ಆರ್
ನಮ್ಮ ಮೇಲಾಧಿಕಾರಿಗಳೇ ಸುಳ್ಳು ಹೇಳಿ ವರ್ಗಾವಣೆ ಮಾಡಿಸಿದ್ದಾರೆ ಅಂತ ಆಕ್ರೋಶ
ಅಸ್ವಸ್ಥ ಕಾನಸ್ಟೇಬಲ್ ಜಿಮ್ಸ್ ಆಸ್ಪತ್ರೆಗೆ ದಾಖಲು
ಕಲಬುರಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 59 ಕಾನಸ್ಟೇಬಲ್ ಗಳನ್ನು ವರ್ಗಾವಣೆ
ತಮಗೆ ಬೇಡವಾದವರನ್ನು ವರ್ಗಾವಣೆ ಮಾಡಿಸಿದ್ದಾರೆ
ಮೇಲಾಧಿಕಾರಿಗಳು ವರ್ಗಾವಣೆ ಮಾಡಿಸಿದ್ದಾರೆ ಅಂತ ಕಾನಸ್ಟೇಬಲ್ ಗಳ ಆರೋಪ