Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ ಉಸ್ತುವಾರಿ…!? ಬಿಜೆಪಿ ಅಜೆಂಡಾ ಅನುಸರಿಸಲು ಮುಂದಾದ “ಐ”…

1 min read
Spread the love

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಎರಡು ದಿನಗಳ ನಂತರ ಖಾತೆ ಹಂಚಿಕೆ ನಡೆದಿದ್ದು, ಇದೀಗ ಜಿಲ್ಲಾ ಉಸ್ತುವಾರಿಗೂ ಗೊಂದಲ ಸೃಷ್ಠಿಯಾಗಿದೆ. ಕಾಂಗ್ರೆಸ್ ಕೂಡಾ ಬಿಜೆಪಿಯ ಅಜೆಂಡಾವನ್ನ ಜಾರಿಗೆ ತರಲು ಮುಂದಾಗಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಆಯಾ ಜಿಲ್ಲೆಯ ಮಂತ್ರಿಗಳಿಗೆ ಅದೇ ಜಿಲ್ಲೆಯ ಉಸ್ತುವಾರಿ ಕೊಡದಿರುವುದಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಗೊತ್ತಾಗಿದೆ.

ಧಾರವಾಡ ಜಿಲ್ಲೆಯ ಉಸ್ತುವಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಕೊಡುವ ಸಾಧ್ಯತೆಯಿದೆಯಂತೆ. ಹಾಗೇ ಬೇರೆ ಬೇರೆ ಸಚಿವರಿಗೆ ಬೇರೆ ಬೇರೆ ಜಿಲ್ಲೆಯ ಉಸ್ತುವಾರಿ ಕೊಡಲಿದ್ದಾರೆನ್ನಲಾಗಿದೆ.

ಬಿಜೆಪಿ ಕೂಡಾ ಸ್ಥಳೀಯರಿಗೆ ಉಸ್ತುವಾರಿಯನ್ನ ಕೊಡದೇ ಬೇರೆ ಜಿಲ್ಲೆಯ ಉಸ್ತುವಾರಿ ನೀಡಿ, ಗೊಂದಲ ಸೃಷ್ಟಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *

You may have missed