ಮಾತು ತಪ್ಪದ ಭಗೀರಥನಿಗೆ “ಅದ್ಧೂರಿ ಸ್ವಾಗತ” ಕೋರಿದ ‘ಬಂಡಾಯದ ನಾಡಿನ ಜನ’…
1 min readನವಲಗುಂದ: ಸಾವಿರಾರೂ ದಿನಗಳ ಹೋರಾಟ ತಾರ್ಕಿಕ ಅಂತ್ಯ ಕಾಣುವುದಕ್ಕೆ ಪ್ರಮುಖವಾಗಿ ಹೋರಾಟ ನಡೆಸಿ, ಸಫಲರಾದ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನ ಬಂಡಾಯದ ನಾಡಿನ ರೈತರು ಆದರಪೂರ್ವಕವಾಗಿ ಅದ್ಧೂರಿಯಾಗಿ ಸ್ವಾಗತಿಸಿದರು.
ಹೌದು.. ನವಲಗುಂದ ಪಟ್ಟಣದಲ್ಲಿ ಅಕ್ಷರಸಃ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು. ಮಹದಾಯಿಗೆ ಕೇಂದ್ರ ಸರಕಾರ ಅಸ್ತು ನೀಡಿದ ಹಿನ್ನೆಲೆಯಲ್ಲಿ ರೈತರು ಹಸನ್ಮುಖಿಯಾಗಿದ್ದಾರೆ. ಅವರ ಗೆಲುವಿಗೆ ಕಾರಣವಾಗಿರುವ ರೈತ ನಾಯಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಪಟ್ಟಣಕ್ಕೆ ಬರುತ್ತಿದ್ದ ಹಾಗೇ ಜಯಘೋಷ ಮೊಳಗಿತು.
ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ನಂತರ ಹುತಾತ್ಮ ರೈತರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಾಯಿತು. ಸಾವಿರಾರೂ ದಿನಗಳಿಂದ ಹೋರಾಟ ನಡೆಸಿದ ರೈತರು ಹರ್ಷಚಿತ್ತರಾಗಿ, ಸಚಿವರ ಕಾರ್ಯವನ್ನ ಸ್ಮರಿಸಿದರು.