Posts Slider

Karnataka Voice

Latest Kannada News

ಉಚಿತ ವಿವಾಹಕ್ಕೆ “ವಿಶ್ವದಾಖಲೆ” ರೂಪ ಕೊಡಲಿರುವ “ಕಲಘಟಗಿ ಕ್ಷೇತ್ರದ ಗಣಿಧಣಿ”..

Spread the love

ಧಾರವಾಡ: ಕಳೆದ ಅಗಸ್ಟ್ 15ರಂದು ಕಲಘಟಗಿ-ಅಳ್ನಾವರ ಮತಕ್ಷೇತ್ರ ವಿಶ್ವದ ಅತಿ ಉದ್ದನೆಯ ತಿರಂಗಾ ರ‌್ಯಾಲಿಗೆ ಸಾಕ್ಷಿಯಾಗಿ ವರ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದು ನಿಮೆಗೆಲ್ಲ ಗೊತ್ತೇ ಇದೆ.

ಈಗ ಮತ್ತೊಮ್ಮೆ ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾಗುವ ಸಮಯ ಬಂದಿದೆ.

ದೀನ ದಲಿತರ ಹಾಗೂ ಬಡವರ ಬಂಧು, ಕಾಯಕಯೋಗಿ, ಶಿಕ್ಷಣ ಪ್ರೇಮಿ, ದಣಿವರಿಯದ ನಾಯಕ ಮಾಜಿ ಸಚಿವ ಸಂತೋಷ್ ಲಾಡ್ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ,

ಸಂತೋಷ್ ಲಾಡ್ ಫೌಂಡೇಶನ್, ಲಾಡ್ ಪರಿವಾರ ಹಾಗೂ ಸಂತೋಷ್ ಲಾಡ್ ಗೆಳೆಯರ ಬಳಗದ ಸಾರಥ್ಯದಲ್ಲಿ ಹಾಗೂ ಕಲಘಟಗಿ ಹಾಗೂ ಅಳ್ನಾವರ ಭಾಗದ ಸಮಸ್ತ ಗುರು ಹಿರಿಯರ ಸಮ್ಮುಖದಲ್ಲಿ

ವಿಶ್ವ ದಾಖಲೆಯ 4000 ವರೆಗೆ ಜೋಡಿಗಳ ಬೃಹತ್ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ಈ ಕಾರ್ಯಕ್ರಮ ವಿಶ್ವದಾಖಲೆಗೂ ಪಾತ್ರವಾಗುವ ಸಾಧ್ಯತೆ ಇದೆ

ಫೆಬ್ರವರಿ 27 2023 ರ ಸೋಮವಾರದಂದು ಕುರುವಿನ‌ಕೊಪ್ಪ, ಬೂದನಗುಡ್ಡ ರಸ್ತೆಯಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ.

ವಧುವಿಗೆ ತಾಳಿ, ಕಾಲುಂಗುರ, ಸೀರೆ, ಬಾಸಿಂಗ ಹಾಗೂ ವರನಿಗೆ ಶರ್ಟ್ ಪಂಚೆ ಹಾಗೂ ಬಾಸಿಂಗವನ್ನು ನೀಡಲಾಗುವುದು.

ಈ ಮಹೋನ್ನತ ಕಾರ್ಯಕ್ರಮದಲ್ಲಿ ವಿವಾಹವಾಗಿ ವಿಶ್ವದಾಖಲೆಯ ಭಾಗವಾಗುವವರು ಈ ಕೂಡಲೇ ನಿಮ್ಮ ಹೆಸರನ್ನು ಸೂಕ್ತ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಿ


Spread the love

Leave a Reply

Your email address will not be published. Required fields are marked *