ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿದ್ದ ಹೆಡ್ ಕಾನ್ಸಟೇಬಲ್ “ಇಮ್ಮಡಿ ಸತೀಶ” ಇನ್ನಿಲ್ಲ…
1 min readಧಾರವಾಡ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಇಂದು ಬೆಳಗಿನ ಜಾವ ಶಹರ ಪೊಲೀಸ್ ಠಾಣೆ ಹಿಂಭಾದಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ನಿಧನರಾಗಿದ್ದಾರೆ.
1996 ರ ಬ್ಯಾಚಿನ ಸತೀಶ ಇಮ್ಮಡಿಯವರು ಮೂಲತಃ ಹಾವೇರಿಯವರು. ನಗರದ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.
ಪೊಲೀಸ್ ವಸತಿ ಗೃಹದಲ್ಲಿ ಪತ್ನಿಯೊಂದಿಗಿದ್ದ ಅವರು, ಕೆಲವು ದಿನಗಳ ಹಿಂದೆ ಅನಾರೋಗ್ಯವಾಗಿತ್ತು. ಈ ಬಗ್ಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ನಿಧನರಾಗಿರುವ ಸತೀಶ ಇಮ್ಮಡಿಯವರ ಪಾರ್ಥಿವ ಶರೀರವನ್ನ ಹಾವೇರಿಗೆ ತೆಗೆದುಕೊಂಡು ಹೋಗಲು ಕುಟುಂಬದವರು ತೀರ್ಮಾನಿಸಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.
ಸಣ್ಣ ವಯಸ್ಸಿನಲ್ಲಿಯೇ ಇಲಾಖೆಯಲ್ಲಿನ ಹಲವರು ಪ್ರಾಣ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ. ಕರ್ತವ್ಯ ನಿರ್ವಹಿಸುವಾಗ ಆರೋಗ್ಯದ ಬಗ್ಗೆ ನಿಷ್ಕಾಳಜಿ ಮಾಡುವುದನ್ನ ಸಿಬ್ಬಂದಿಗಳು ಬಿಡಬೇಕು.