ಧಾರವಾಡದಲ್ಲಿ “ತಾಯಿಗೆ ಚಾಕು” ಹಾಕಿದ ಮಗಳು-ಪ್ರೇಮಿ: ಹೆತ್ತವ್ವಳ ಸ್ಥಿತಿ ಗಂಭೀರ…

ಧಾರವಾಡ: ತನ್ನ ಪ್ರೀತಿಗೆ ತಾಯಿ ಪದೇ ಪದೇ ಅಡ್ಡಿಯಾಗುತ್ತಿದ್ದಾಳೆ ಎಂದುಕೊಂಡ ಮಗಳು ಪ್ರಿಯಕರನ ಜೊತೆಗೂಡಿ, ಚಾಕು ಇರಿದು ಕೊಲೆ ಮಾಡಲು ಯತ್ನಿಸಿರುವ ಪ್ರಕರಣ ನಗರದ ಹಾವೇರಿಪೇಟೆಯಲ್ಲಿ ನಡೆದಿದೆ.
ಹುಬ್ಬಳ್ಳಿ Exclusive
ಧಾರವಾಡದಲ್ಲಿ ಪ್ರಿಯಕರನ ಜೊತೆ ಸೇರಿ ತಾಯಿಗೆ ಚೂರಿ ಇರಿದ ಕ್ರೂರಿ ಮಗಳು.
ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾವೇರಿ ಪೇಟ್ ನಲ್ಲಿ ಘಟನೆ.
ಜೀಜಾಬಾಯಿ ಎಂಬ ಮಹಿಳೆಯ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೇ
ಪ್ರಿಯಕರನ ಜೊತೆ ಸೇರಿ ತಾಯಿಗೆ ಚಾಕು ಇರಿದು ಪ್ರೇಮಿ ಜೊತೆ ಎಸ್ಕೇಪ್ ಆದ ಕ್ರೂರಿ ಮಗಳು.
ಸ್ಫೂರ್ತಿ ಎಂಬ ಮಗಳು ಹಾಗೂ ಆಕೆಯ ಪ್ರಿಯಕರನಿಂದ ಕೀಚಕ ಕೃತ್ಯ
ಹಲವು ವರ್ಷಗಳಿಂದ ಕಿರಣ ಎಂಬುವನ ಜೊತೆ ಜೀಜಾಬಾಯಿ ಮಗಳು ಸ್ಫೂರ್ತಿ ಲವ್ವಿಡವ್ವಿ.
ಕಳೆದ ಎರಡು ತಿಂಗಳ ಹಿಂದೆ ಕಿರಣ ಜೊತೆ ಓಡಿ ಹೋಗಿದ್ದ ಜೀಜಾಬಾಯಿಯ ಮಗಳು ಸ್ಫೂರ್ತಿ.
ಈ ಹಿನ್ನೆಲೆಯಲ್ಲಿ ಕಿರಣ ಮೇಲೆ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದ ಜೀಜಾಬಾಯಿ.
ಕಳೆದ 2 ತಿಂಗಳಿಂದ ಸ್ಫೂರ್ತಿ ಕೂಡಾ ರಿಮ್ಯಾಂಡ್ ಹೋಮ್ ನಲ್ಲಿದ್ದ ಸ್ಫೂರ್ತಿ.
ಕಿರಣ್ ಕೂಡಾ ಎರಡು ತಿಂಗಳಿಂದ ಜೈಲಿನಲ್ಲಿದ್ದು ಬೇಲ್ ಮೇಲೆ ಹೊರಗೆ ಬಂದಿದ್ದ ಕಿರಣ್.
ಮಧ್ಯರಾತ್ರಿ 2.45 ರ ಸುಮಾರಿಗೆ ಜೀಜಾಬಾಯಿ ಮನೆಗೆ ಹಿತ್ತಲು ಬಾಗಿಲಿನಿಂದ ಬಂದಿದ್ದ ಕಿರಣ.
ತಾಯಿ ಮಲಗಿದ್ದಾಗ ಹಿತ್ತಲು ಬಾಗಿಲಿನ ಕದ ತೆಗೆದು ಕಿರಣ್ ನನ್ನು ಒಳಗೆ ಕರೆದೊಯ್ದ ಸ್ಫೂರ್ತಿ.
ತನಗೆ ಕನಸಿನಲ್ಲಿ ಚಾಕು ಇರಿಯುತ್ತಿದ್ದಾರೆ ಎಂದು ಭಾವಿಸಿದ್ದ ಜೀಜಾಬಾಯಿ.
ಕಣ್ಣು ಬಿಟ್ಟು ನೋಡಿದಾಗ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನ ನೋಡಿ ಕಂಗಾಲಾದ ಜೀಜಾಬಾಯಿ.
ಜೀಜಾಬಾಯಿ ಎಚ್ಚರಗೊಳ್ಳುತ್ತಿದ್ದ ಹಾಗೆ ಇಬ್ಬರು ಕೂಡಾ ಎಸ್ಕೇಪ್.
ಬೆನ್ನಿಗೇ ಇರಿದ ಚಾಕು ಇಟ್ಟುಕೊಂಡೇ ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಜೀಜಾಬಾಯಿ
ಸ್ಥಳಕ್ಕೆ ಆಗಮಿಸಿದ ಪೋಲಿಸರಿಂದ ಜೀಜಾಬಾಯಿಯನ್ನು ಕೀಮ್ಸ್ ಗೇ ಚಿಕಿತ್ಸೆಗಾಗಿ ದಾಖಲು.
ಸಧ್ಯ ಜೀಜಾಬಾಯಿ ಪರಿಸ್ಥಿತಿ ಗಂಭೀರವಾಗಿದ್ದು ಕೀಮ್ಸ್ ICU ನಲ್ಲಿ ಚಿಕಿತ್ಸೆ.
ಹಾವೇರಿಯಲ್ಲಿ ಟ್ರೆಸರರಿ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಜೀಜಾಬಾಯಿ.