Posts Slider

Karnataka Voice

Latest Kannada News

ಧಾರವಾಡದಲ್ಲಿ “ಸಬ್ ಇನ್ಸಪೆಕ್ಟರ್ ಮಗ”ನಿಂದ ಪತ್ನಿಯ ಹತ್ಯೆ…

1 min read
Spread the love

ಧಾರವಾಡ: ತನ್ನ ಪತ್ನಿ ಬೇರೆಯವರೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾಳೆಂಬ ಸಂಶಯದಿಂದ ಚಾಕು ಹಾಕಿ ಹತ್ಯೆ ಮಾಡಿರುವ ಪ್ರಕರಣ ಧಾರವಾಡದ ಮೆಹಬೂಬನಗರದ ಸಮೀಪದ ಬಡಾವಣೆಯಲ್ಲಿ ನಡೆದಿದೆ.

ಹತ್ಯೆಯಾದ ಪತ್ನಿ

ಸಶಸ್ತ್ರ ಮೀಸಲು ಪಡೆಯಲ್ಲಿನ ನಿವೃತ್ತ ಸಬ್ ಇನ್ಸಪೆಕ್ಟರ್ ಪುತ್ರ ಇಸಾಕ್ ಜಾಹಗೀರದಾರ ಎಂಬಾತನೇ ತನ್ನ ಪತ್ನಿ ಆಸ್ಮಾ ಎಂಬಾಕೆಯನ್ನ ಚಾಕುವಿನಿಂದ ಹಲವು ಬಾರಿ ಇರಿದು ಗಾಯಗೊಳಿಸಿದ್ದ.

ಕೊಲೆಪಾತಕ

ಚಾಕುವಿನಿಂದ ಹಲ್ಲೆಗೊಳಗಾಗಿದ್ದ ಮಹಿಳೆಯನ್ನ ಕಿಮ್ಸಗೆ ಬುಧವಾರ ದಾಖಲು ಮಾಡಲಾಗಿತ್ತಾದರೂ, ತೀವ್ರವಾದ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸನಲ್ಲಿ ಸಾವಿಗೀಡಾಗಿದ್ದಾರೆ.

ಬುಧವಾರವೇ ಧಾರವಾಡದ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *