ಮಹಿಳಾ ಅಧಿಕಾರಿಗೆ “ಅವುಗಳನ್ನ” ಡೆಕ್ಲಾತಾನ್ ನಲ್ಲಿ ಕೊಡಿಸಿದ್ದು ಯಾರೂ ಗೊತ್ತಾ….!!??
1 min readಧಾರವಾಡ: ತನ್ನ ಪತಿಯನ್ನೂ ತನ್ನದೇ ಕಚೇರಿಯಲ್ಲಿ ಕೂಡಿಸಿಕೊಂಡು ಅಧಿಕಾರ ನಡೆಸಲು ಮುಂದಾಗಿದ್ದ ಮಾಹಿತಿ ಹೊರಗೆ ಬೀಳುತ್ತಿದ್ದ ಹಾಗೇ, ಸ್ವಲ್ಪ ಮಟ್ಟಿನ ಭಯ ಭಕ್ತಿಯನ್ನ ತೋರಿಸುತ್ತಿದ್ದಾರಾದರೂ, ಹಲವು ಮಾಹಿತಿಗಳು ಕರ್ನಾಟಕವಾಯ್ಸ್.ಕಾಂಗೆ ಲಭಿಸುತ್ತಿವೆ.
ದಕ್ಷತೆಯ ಮುಖವಾಡ ಹಾಕಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ‘ಇಮೇಜ್’ ಬಿಲ್ಡಿಪ್ ಮಾಡಿದ ಮಹಾನ್ ಮಹಿಳಾ ಅಧಿಕಾರಿಗೆ 10 ಸಾವಿರ ರೂಪಾಯಿ ಮೌಲ್ಯದ ಬಟ್ಟೆಯನ್ನ ಕೆಳ ಹಂತದ ಅಧಿಕಾರಿಯೋರ್ವ ಕೊಡಿಸಿದ್ದ ಎಂಬುದು ಗೊತ್ತಾಗಿದೆ.
10ಸಾವಿರವನ್ನೂ ಖರ್ಚು ಮಾಡದಿರುವಂತ ಅಧಿಕಾರಿ ಇವರಾಗಿದ್ದಾರೆಂದು ಹೇಳಲಾಗುತ್ತಿದೆ. ತಾವು ಹಾಕಿಕೊಳ್ಳುವ ಟ್ರಾಕ್ ಸೂಟ್, ಜರ್ಕೀನ್ ಕೂಡಾ ಅದೇ ಅಧಿಕಾರಿ ಕೊಡಿಸಿದ್ದನೆಂದು ಹೇಳಲಾಗುತ್ತಿದೆ.
ಆಗಾಗ ಕೇಳಿದ್ದನ್ನ ಕೊಡಿಸದೇ ಇದ್ದರೇ, ಅವರ ಬಗ್ಗೆ ಕುಂಟು ನೆಪಗಳನ್ನ ಹೇಳಿ ಬೇರೆ ಕಡೆ ವರ್ಗಾಯಿಸುವ ತಂತ್ರವನ್ನ ಮಹಿಳಾ ಅಧಿಕಾರಿ ರೂಢಿಸಿಕೊಂಡಿದ್ದು, ಆ ಇಲಾಖೆಯ ಪ್ರತಿಯೊಬ್ಬರಿಗೂ ಗೊತ್ತೆಯಿದೆಯಂತೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಗಳು ಲಭಿಸುತ್ತಿದ್ದು, ಮಹಿಳಾ ಅಧಿಕಾರಿಯ ಮುಖವಾಡ ಬಯಲಾಗಲಿದೆ.