“ಗುಡಗೇರಿಯ ಕಳಸ”ದ ಗ್ರಾಮ ಪಂಚಾಯತಿಯಲ್ಲೇ ಮಾರಾಮಾರಿ…!

ಕುಂದಗೋಳ: ತಾಲೂಕಿನ ಕಳಸ ಗ್ರಾಮ ಪಂಚಾಯತಿಯಲ್ಲಿ ಡಿ ದರ್ಜೆ ನೌಕರರಿಗೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಪಂಚಾಯತಿ ಸದಸ್ಯರೊಬ್ಬರು ಕೈ ಕೈ ಮಿಲಾಯಿಸಿದ ಪ್ರಕರಣ ನಡೆದಿದೆ.
ಪಂಚಾಯತಿಯಲ್ಲಿ ಡಿ ದರ್ಜೆ ನೌಕರರಿಗೆ ನೋಟಿಸ್ ನೀಡಿದ್ದರಿಂದ ಪ್ರಶ್ನೆ ಮಾಡಲು ಹೋದವರ ಜೊತೆಯಲ್ಲಿ ಪಂಚಾಯತಿ ಸದಸ್ಯರು ಕೈ ಕೈ ಮಿಲಾಯಿಸಿದ್ದಾರೆ. ಈ ಎಕ್ಸಕ್ಲೂಸಿವ್ ದೃಶ್ಯಾವಳಿಗಳು ಇಲ್ಲಿವೆ ನೋಡಿ..
ಕಳಸ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಡಿ ದರ್ಜೆ ನೌಕರರಿಗೆ ಗ್ರಾಮ ಪಂಚಾಯತಿ PDO ಹಾಗು ಸದಸ್ಯರು ನೋಟಿಸ್ ನೀಡಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಹೋದಾಗ ಪಂಚಾಯತ್ ಸದಸ್ಯರ ನಡುವೆ ಮಾರಾಮಾರಿ ಸಂಭವಿಸಿದೆ.
ಘಟನೆ ನಡೆಯುತ್ತಿದ್ದ ಹಾಗೇ ಗುಡಗೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದು, ಹೆಚ್ಚುವರಿ ಪೊಲೀಸರನ್ನ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.