Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಹಾಡುಹಗಲೇ ಅಕ್ರಮ ಮದ್ಯ ಸಾಗಾಟ: ಲಕ್ಷಾಂತರ ಮೌಲ್ಯದ “ದಾರೂ” ಪತ್ತೆ- ಆರೋಪಿ ಪರಾರಿ…!

Spread the love

ಹುಬ್ಬಳ್ಳಿ:  ಅಕ್ರಮವಾಗಿ ಆಟೋದಲ್ಲಿ ಮದ್ಯವನ್ನ ಸಾಗಾಟ ಮಾಡುತ್ತಿದ್ದ  ವೇಳೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು,, ಲಕ್ಷಾಂತರ ರೂಪಾಯಿ ಮೌಲ್ಯದ ಆಟೋ ಹಾಗೂ ಮದ್ಯ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಇಂದು ನಗರದ ಅಂಜುಮನ್ ಶಾದಿ ಮಹಲ್ ಹತ್ತಿರ ದಾಳಿ ನಡೆದ ಸಮಯದಲ್ಲಿ ಸುಮಾರು 122916ರೂಪಾಯಿ ಮೌಲ್ಯದ ಆಟೋದಲ್ಲಿ 164.160 ಲೀಟರ್ ಮದ್ಯ ಹಾಗೂ 46.800 ಲೀಟರ್ ಬಿಯರ್ ಸಿಕ್ಕಿದ್ದು, ಆರೋಪಿಗಳು  ಪರಾರಿಯಾಗಿದ್ದಾರೆ.

ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 11 ಮತ್ತು 14 ರ ಉಲ್ಲಂಘನೆ ಹಾಗೂ 32(1), 38(ಎ),  ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುವ ಕಾರಣ ಪರಾರಿತ ಆರೋಪಿ ಹಾಗೂ ವಾಹನದ ಮಾಲೀಕನ  ವಿರುದ್ಧ ಪ್ರಥಮ ವರ್ತಮಾನ ವರದಿಯನ್ನು ಹುಬ್ಬಳ್ಳಿ ಉಪ ವಿಭಾಗ -01 ರ ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ, ದಾಳಿಯಲ್ಲಿ ಅಬಕಾರಿ ಪೇದೆಗಳಾದ ಜಾನ್ ವರ್ಗಿಸ್, ಸಿದ್ದಪ್ಪ ಕಮ್ಮಾರ, ಐ. ಡಿ. ಕಿತ್ತೂರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *