“ಅದೇ” ಪೊಲೀಸ್ ಠಾಣೆಯಲ್ಲಿ ಹದಿನೈಪ್ಪತ್ತು ದಿನಗಳಲ್ಲಿ ಏನೇನು ನಡೆದಿವೆ ಗೊತ್ತಾ…

ಹುಬ್ಬಳ್ಳಿ: ಕರ್ನಾಟಕವಾಯ್ಸ್.ಕಾಂ ಪ್ರಕರಣವೊಂದನ್ನ ಹೊರಗೆ ಹಾಕಿದ ನಂತರ ಹಲವರು ಹಲವು ಮಾಹಿತಿಗಳನ್ನ ಕೊಡುತ್ತಿದ್ದಾರೆ. ಬಂದಿರುವ ಮಾಹಿತಿಯನ್ನ ಹೊರಗೆ ಹಾಕುವುದು ನಮ್ಮ ಉದ್ದೇಶವಾಗಿರುವುದರಿಂದ ಹಾಗೇ ಬಂದ ಮಾಹಿತಿಯನ್ನ ಹೀಗೆ ಹೇಳುತ್ತಿದ್ದೇವೆ.
ಕಳೆದ ಕೆಲವು ದಿನಗಳ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದರೆಂದು ಆರು ಜನರನ್ನ ಹಿಡಿದುಕೊಂಡು ಬಂದು, ಮೂವರ ಮೇಲೆ ಕೇಸ್ ಹಾಕಿ, ಮೂವರಿಗೆ ಚೆಂಬು ಮಾಡಿ ಕಳಿಸಿರುವುದು ರಹಸ್ಯವಾಗಿ ಉಳಿದಿಲ್ಲ.

ಇದೇ ಸಮಯದಲ್ಲಿ ಅಂದರ್-ಬಾಹರ್ ಆಡುತ್ತಿದ್ದ ಹಲವರನ್ನ ಹಿಡಿದುಕೊಂಡು ಬಂದು ಠಾಣೆಯಲ್ಲಿ ಬೆಳಗಿನ ಜಾವದವರೆಗೆ ಕೂಡಿಸಿಕೊಂಡು ಒಂದೇ ಒಂದು ಕೇಸ್ ಹಾಕದೇ ಎಂಜಿಲು ತಿಂದು ಕಳಿಸಿದ್ದು ಕೂಡಾ ಠಾಣೆಯಲ್ಲಿ ಕೇಳಿ ಬರುತ್ತಿದೆ.
ಸಿಬ್ಬಂದಿಯೋರ್ವ “ಸರ್, ಕೇಸ್ ಮಾಡೂನ್ರೀ” ಎಂದರೂ, ಏ ಮಾರಾಯಾ ಅದನ್ನೇಲ್ಲಾ ಏನ್ ಮಾಡಕೋತ್ ಕೂಡ್ತಿ, ಸರಿ ಮಾಡಿಸಿ ಕಳಿಸು ಎಂದು ಹೇಳಿ, ಸಿಬ್ಬಂದಿಗಳನ್ನ ಪೇಚಿಗೆ ಸಿಲುಕಿಸಿದ ಕೀರ್ತಿಯ ಮಹಾನ್ ಮೇಧಾವಿಗೆ ಸಲ್ಲುತ್ತಿದೆ.
ಕ್ರೈಂ ಯಾವೂದು, ಯಾವೂದು ಕ್ರೈಂ ಅಲ್ಲಾ ಎಂಬುದು ಕರ್ನಾಟಕವಾಯ್ಸ್.ಕಾಂ ಸ್ವಲ್ಪ ಮಟ್ಟಿಗಾದರೂ ಗೊತ್ತಿರತ್ತೆ. ಸರಕಾರದ ಕೆಲಸ ದೇವರ ಕೆಲಸವೆಂದು ಸರಕಾರಿ ಸಂಬಳದವರು ಮರೆತಿರುವುದನ್ನ ಎಚ್ಚರಿಸೋದು ಕರ್ನಾಟಕವಾಯ್ಸ್.ಕಾಂಗೆ ಗೊತ್ತಿದೆ… ಮಿಸ್ಟರ್ “161” ಗಿರಾಕಿ. ಮುಂದಿನ ದಿನಗಳಲ್ಲಿ “ಈ” ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ದೋ ನಂಬರ ದಂಧೆಗಳನ್ನ ಸಾಕ್ಷಿ ಸಮೇತ ಹೊರಗೆ ಹಾಕಲು ಕರ್ನಾಟಕವಾಯ್ಸ್.ಕಾಂ ಉತ್ಸುಕವಾಗಿದೆ. ಯಾವುದೇ ಥರದ ಮಾಹಿತಿಗಳಿದ್ದರೂ, ನಮ್ಮ ವಾಟ್ಸಾಫ್ ನಂಬರಗೆ ಕಳಿಸಿ, ಜನರ ಬದುಕಿಗೆ ನೆಮ್ಮದಿಯನ್ನ ಮೂಡಿಸೋಣ. ಸಂಬಳಕ್ಕಾಗಿ ಬಂದವರು ಸಂಬಳದಲ್ಲಿಯೇ ಮನೆಯವರನ್ನ ಸಾಕುವಂತಹ ಬುದ್ಧಿಯನ್ನ ದೇವರು “161” ಗಿರಾಕಿಗಳಿಗೆ ಮೂಡಿಸಲಿ ಎಂದು ಪ್ರಾರ್ಥಿಸೋಣ…