ಕಲಘಟಗಿಯ ಕಾಡನಕೊಪ್ಪದಲ್ಲಿ ಸ್ಪೋಟಕಗಳು ಪತ್ತೆ…!

ಕಲಘಟಗಿ: ತಾಲೂಕಿನ ಕಾಡನಕೊಪ್ಪ ಗ್ರಾಮದ ಬಳಿಯ ಕ್ರಷರೊಂದರಲ್ಲಿ ಅಕ್ರಮ ಸ್ಪೋಟಕಗಳು ಪತ್ತೆಯಾಗಿದ್ದು, ಕಲಘಟಗಿ ಠಾಣೆ ಪೊಲೀಸರು ಓರ್ವನನ್ನ ಬಂಧನ ಮಾಡಿ, ಸ್ಪೋಟಕಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಡನಕೊಪ್ಪದ ಬಳಿಯಿರುವ ಪದ್ಮಾವತಿ ಸ್ಟೋನ್ ಕ್ರಷರನಲ್ಲಿಯೇ ಅಕ್ರಮವಾದ ಸ್ಪೋಟಕಗಳು ಪತ್ತೆಯಾಗಿವೆ. ಅಪಾಯಕಾರಿ ಸ್ಪೋಟಕಗಳಾದ ಜಿಲೆಟಿನ್ ಹಾಗೂ ಇಲೆಕ್ಟ್ರಾನಿಕ್ ಡಿಟೋನೇಟರಗಳನ್ನ ವಶಕ್ಕೆ ಪಡೆಯಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಮಿಶ್ರಿಕೋಟಿಯ ಖಂಡಪ್ಪ ಕೇರಪ್ಪ ಹುಬ್ಬಳ್ಳಿ ಎಂಬಾತನನ್ನ ಬಂಧನ ಮಾಡಲಾಗಿದ್ದು, ಸುಹಾಸ ಮಿಶ್ರಿಕೋಟಿ ಪರಾರಿಯಾಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕ್ರಷರನಲ್ಲಿ ಬಳಕೆ ಮಾಡುವ ಉದ್ದೇಶದಿಂದ ತಂದಿರುವ ಸಾಧ್ಯತೆಗಳಿದ್ದು, ಪದ್ಮಾವತಿ ಸ್ಟೋನ್ ಕ್ರಷರ್ ಮೇಲೆ ಪೊಲೀಸರು ಅದ್ಯಾವ ರೀತಿಯ ಕ್ರಮಗಳನ್ನ ಜರುಗಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.