ಶಿಕ್ಷಣ ಸಚಿವ ಸುರೇಶಕುಮಾರ ರಾಜ್ಯದ ಮುಖ್ಯಮಂತ್ರಿಯಂತೆ…!
1 min readಬೆಂಗಳೂರು: ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿ. ಅಧಿಕಾರ ಸ್ವೀಕರಿಸಿ 24 ಗಂಟೆ ಕಳೆದಿಲ್ಲ. ಅಷ್ಟರಲ್ಲಿಯೇ ಶಿಕ್ಷಣ ಸಚಿವರಾಗಿದ್ದ ಸುರೇಶಕುಮಾರ ಅವರನ್ನೂ ರಾಜ್ಯದ ಮುಖ್ಯಮಂತ್ರಿಯಂದು ಕರೆಯಲಾಗುವ ಫೇಸ್ ಬುಕ್ ಅಕೌಂಟ್ ಸಿದ್ಧವಾಗಿದೆ.
ಈ ಬಗ್ಗೆ ಸ್ವತಃ ಸುರೇಶಕುಮಾರ ಅವರೇ ಬರೆದುಕೊಂಡಿದ್ದು, ಇದೊಂದು ಪಿಡುಗು ಆರಂಭವಾಗಿದ್ದು, ಈ ಫೇಸ್ ಬುಕ್ ಅಕೌಂಟಿನಿಂದ ಬಂದ ಯಾವುದೇ ರಿಕ್ವೇಸ್ಟ್ ನ್ನ ತೆಗೆದುಕೊಳ್ಳಬಾರದೆಂದು ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುರೇಶಕುಮಾರ ಅವರ ಬೇರೆಯದ್ದೆ ಅಕೌಂಟ್ ಇದ್ದು, ಅದರಲ್ಲಿ ಸಾವಿರಾರೂ ಜನರು ಪಾಲೋವರ್ಸ್ ಇದ್ದಾರೆ. ಆದರೆ, ಕಿಡಗೇಡಿಗಳು ಅವರನ್ನೇ ಮುಖ್ಯಮಂತ್ರಿಯಂದು ಬಿಂಬಿಸಿ, ಅಕೌಂಟ್ ತೆಗೆಯಲಾಗಿದೆ.