ಕಲಘಟಗಿ ಕ್ಷೇತ್ರದಲ್ಲಿ ಅಕ್ರಮ ಮದ್ಯ- ಡಿಸಿ,ಎಸ್ಪಿಗೆ ಮನವಿ ಸಲ್ಲಿಸಿದ ಮಾಜಿ ಸಚಿವ ಸಂತೋಷ ಲಾಡ…!
1 min readಧಾರವಾಡ: ಕಲಘಟಗಿ ಕ್ಷೇತ್ರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಹಲವು ಕುಟುಂಬಗಳು ನಾಶವಾಗುತ್ತಿವೆ. ಇದನ್ನ ತಡೆಗಟ್ಟಬೇಕೆಂದು ಮಾಜಿ ಸಚಿವ ಸಂತೋಷ ಲಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿದರು.
ಕಲಘಟಗಿ ಕ್ಷೇತ್ರದಲ್ಲಿ ಆಹಾರ ಧಾನ್ಯ ವಿತರಣೆ ಸಮಯದಲ್ಲಿ ನೂರಾರೂ ಮಹಿಳೆಯರು ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟದ ಬಗ್ಗೆ ಗಮನಕ್ಕೆ ತಂದಿದ್ದು, ಇದರಿಂದ ಗ್ರಾಮೀಣ ಭಾಗದ ಜನರ ನೆಮ್ಮದಿ ಹಾಳಾಗಿದೆ ಎಂದು ಸಂತೋಷ ಲಾಡ ಬೇಸರವ್ಯಕ್ತಪಡಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರನ್ನ ಭೇಟಿ ಮಾಡಿದ ಮಾಜಿ ಸಚಿವ ಸಂತೋಷ ಲಾಡ, ತಕ್ಷಣವೇ ಇದಕ್ಕೆ ಕ್ರಮವನ್ನ ಜರುಗಿಸಬೇಕೆಂದು ಕೇಳಿಕೊಂಡರು.
ಕಾಂಗ್ರೆಸ್ ನ ಹಿರಿಯರಾದ ಎಸ್.ಆರ್.ಪಾಟೀಲ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ, ಇಸ್ಮಾಯಿಲ ತಮಾಟಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.