ಕಾರ್ಪೋರೇಶನ್ ವಾಹನ ಚಾಲಕನಿಗೆ “ಪೀಡ್ಸ್”- ಸರಣಿ ಅಪಘಾತಕ್ಕೆ 8ಕ್ಕೂ ಹೆಚ್ಚು ಬೈಕ್ ಜಖಂ, ಹಲವರಿಗೆ ಗಾಯ…!

ಹುಬ್ಬಳ್ಳಿ: ವಾಹನ ಚಾಲಕನಿಗೆ ಪೀಡ್ಸ್ ಬಂದ ಕಾರಣದಿಂದ ವಾಹನ ನಿಯಂತ್ರಣ ತಪ್ಪಿ8ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಹಲವರಿಗೆ ಗಾಯಗಳಾದ ಘಟನೆ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಈಗಷ್ಟೇ ನಡೆದಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ತ್ಯಾಜ್ಯ ವಸ್ತುಗಳ ನಿರ್ವಹಣೆಯ ವಾಹನ ವಿಮಾನ ನಿಲ್ದಾಣದ ಮುಂಭಾಗದ ಪ್ಯಾಕ್ಟರಿಯೊಂದರ ಸಮೀಪ ಬರುತ್ತಿದ್ದ ಹಾಗೇ, ಚಾಲಕನಿಗೆ ಮೂರ್ಛೆ ರೋಗ ಬಂದಿದೆ.

ತಕ್ಷಣವೇ ನಿಯಂತ್ರಣ ತಪ್ಪಿದ ವಾಹನ ಪ್ಯಾಕ್ಟರಿ ಬಳಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು, ಪರಿಶೀಲನೆಯನ್ನ ನಡೆಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.