Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಧಗಧಗ ಹೊತ್ತಿದೆ ಬೆಂಕಿ…!

Spread the love

ಹುಬ್ಬಳ್ಳಿ: ವಿದ್ಯಾನಗರದ ಸ್ಟೇಶನರಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿರುವ ಘಟನೆ ನಡೆಯುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.

ವಿದ್ಯಾನಗರದಲ್ಲಿರುವ ರೂಪಾ ಸ್ಟೇಶನರಿ ಶಾಫ್ ನಲ್ಲಿಯೇ ಬೆಂಕಿ ತಗುಲಿದ್ದು, ಒಳಗಡೆ ಪೂರ್ಣವಾಗಿ ಆವರಿಸಿಕೊಂಡಿದ್ದರಿಂದ, ಹೊರಗಡೆ ದಟ್ಟವಾದ ಹೊಗೆಯು ಬರುತ್ತಿದ್ದು, ಅಕ್ಕಪಕ್ಕದ ಅಂಗಡಿಯವರು ಗಾಬರಿಯಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸುತ್ತಿದ್ದು, ಅಂಗಡಿಯಲ್ಲಿ ಝರಾಕ್ಸ್, ಗಿಫ್ಟ್ ಐಟಂ, ಮೊಬೈಲ್ ಹಾಗೂ ಡಿಟಿಎಚ್ ಕರೆನ್ಸಿಗಳ ಕಾರ್ಡಗಳು ಇವೆ. ಅಷ್ಟೇ ಅಲ್ಲ, ಪುಸ್ತಕಗಳು ಇರುವುದರಿಂದ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುತ್ತಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದು, ಬೆಂಕಿಯನ್ನ ಆರಿಸುವುದಕ್ಕೆ ಮುಂದಾಗಲಿದ್ದಾರೆ. ತದನಂತರವೇ ಬೆಂಕಿಗೆ ಆಹುತಿಯಾದ ವಸ್ತುಗಳ ಮೌಲ್ಯವೆಷ್ಟು ಎಂಬುದರ ಬಗ್ಗೆ ಮಾಹಿತಿ ದೊರೆಯಲಿದೆ.


Spread the love

Leave a Reply

Your email address will not be published. Required fields are marked *