ರಾಜ್ಯದಲ್ಲಿ 9ವಯಸ್ಸಿನೊಳಗಿನ 40 ಸಾವಿರ ಮಕ್ಕಳಿಗೆ ಕೊರೋನಾ…!

ಬೆಂಗಳೂರು: ಕೊರೋನಾ ವೈರಸ್ ತನ್ನ ಎರಡನೇಯ ಅಲೆಯ ಅಬ್ಬರವನ್ನ ಕಡಿಮೆ ಮಾಡುತ್ತಿರುವ ಸಮಯದಲ್ಲಿಯೇ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿ 40 ಸಾವಿರ ಮಕ್ಕಳಿಗೆ ಕೊರೋನಾ ಬಂದಿರುವುದು ಖಚಿತವಾಗಿದೆ.

ರಾಜ್ಯದಲ್ಲಿ 9 ವಯಸ್ಸಿನ 40 ಸಾವಿರ ಮಕ್ಕಳಿಗೆ ಕೊರೋನಾ ಸೋಂಕು ಆವರಿಸಿದೆ. ಕಳೆದ ಎರಡು ತಿಂಗಳಲ್ಲಿ 15 ಮಕ್ಕಳು ಕೊರೋನಾದಿಂದ ಸಾವಿಗೀಡಾಗಿದ್ದಾರೆ. 10ರಿಂದ 18 ವಯಸ್ಸಿನ ಒಂದು ಲಕ್ಷ 05 ಸಾವಿರ ಮಕ್ಕಳಿಗೂ ಕೊರೋನಾ ಬಂದಿದೆ.
ಮಹಾರಾಷ್ಟ್ರದ ಅಹ್ಮದನಗರದ ಒಂದೇ ಜಿಲ್ಲೆಯಲ್ಲಿ ಒಂಬತ್ತು ಸಾವಿರ ಮಕ್ಕಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಮೂರನೇಯ ಅಲೆಯ ಮುನ್ನವೇ ಮಕ್ಕಳನ್ನ ಕೊರೋನಾ ಬಾಧಿಸುತ್ತಿದೆ.
ಮೂರನೇಯ ಅಲೆಯ ಸಮಯದಲ್ಲಿ ಮಕ್ಕಳಿಗೆ ಬರಬಹುದೆಂಬ ಆತಂಕವಿರುವ ಸಮಯದಲ್ಲಿಯೇ, ಇಂತಹ ಮಾಹಿತಿ ಹೊರಗೆ ಬಂದಿದೆ. ಇದನ್ನ ಎಲ್ಲರೂ ಮನಗಂಡು ಮಕ್ಕಳನ್ನ ಮತ್ತಷ್ಟು ಸೇಪ್ ಆಗಿ ನೋಡಿಕೊಳ್ಳುವ ಅವಶ್ಯಕತೆಯಿದೆ.