ಹುಬ್ಬಳ್ಳಿ ಕಿಮ್ಸನಲ್ಲಿ 78 ಬ್ಲ್ಯಾಕ್ ಪಂಗಸ್ ರೋಗಿಗಳು….!

ಹುಬ್ಬಳ್ಳಿ: ಪ್ರತಿಷ್ಟಿತ ಕಿಮ್ಸ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಪಂಗಸ್ ರೋಗಿಗೆ ತುತ್ತಾದ 78 ಜನರಿಗೆ ಚಿಕಿತ್ಸೆಯನ್ನ ನೀಡಲಾಗುತ್ತಿದ್ದು, ಪ್ರತಿಯೊಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂಬ ಮಾಹಿತಿ ಲಭಿಸಿದೆ.

ಧಾರವಾಡ ಜಿಲ್ಲೆಯ 18 ರೋಗಿಗಳೂ ಸೇರಿದಂತೆ ಒಟ್ಟು 12 ಜಿಲ್ಲೆ ಹಾಗೂ ಒಂದು ಹೊರರಾಜ್ಯದ ರೋಗಿಗೆ ಚಿಕಿತ್ಸೆಯನ್ನ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನ ಜಿಲ್ಲಾಡಳಿತ ನೀಡಿದೆ.
ಬ್ಲ್ಯಾಕ್ ಪಂಗಸ್ ಚಿಕಿತ್ಸೆಗೆ ಬೇಕಾದ ಔಷಧಗಳನ್ನ ವ್ಯವಸ್ಥೆ ಮಾಡಲು ಸಚಿವ ಡಾ.ಸುಧಾಕರ ಮುಂದಾಗಿದ್ದು, ಇಂದು ಕಿಮ್ಸಗೆ ಭೇಟಿ ಮಾಡಿ ಪರಿಶೀಲನೆಯನ್ನೂ ನಡೆಸಿದ್ದಾರೆ.