Posts Slider

Karnataka Voice

Latest Kannada News

ತಿರುಗಿ ಬಿದ್ದ ಪಿಯು ಬೋರ್ಡ್ : ಪಿಯುಸಿ ಫಸ್ಟ್ ಇಯರ್ ಎಕ್ಸಾಂ ನಡೆಸ್ತಾರಂತೆ….!

1 min read
Spread the love

ಮೈಸೂರು: ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಆಗುವ ತೀರ್ಮಾನಗಳನ್ನ ಮಾಡುವವರೇ ಪದೇ ಪದೇ ಬ್ರೇಕ್ ಮಾಡುತ್ತಿರುವುದು ಕಂಡು ಬರುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತೂ ಪಾಲಕರ ಆತಂಕ ಮತ್ತೆ ಹೆಚ್ಚಾಗುತ್ತಿದೆ. ಇದಕ್ಕೆ ಮತ್ತೊಂದು ವಿವಾದವನ್ನ ಪಿಯು ಬೋರ್ಡ್ ಮೈಮೇಲೆ ಎಳೆದುಕೊಳ್ಳಲು ಮುಂದಾಗಿದೆ.

ಈಗಾಗಲೇ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನ ಪಾಸ್ ಮಾಡುವಂತೆ ಇಲಾಖೆ ಸೂಚನೆ ನೀಡಿತ್ತು. ಈಗ ಮತ್ತೆ ರಾಜ್ಯದ ಪ್ರತಿಯೊಂದು ಅಧಿಕಾರಿಗಳ ಜೊತೆ ಜೂಮ್ ಮೀಟ್ ಮಾಡಿ, ಮಾದರಿ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಂದ ಉತ್ತರ ಪಡೆಯಲು ಮುಂದಾಗಿದೆ.

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಕಾರ  ನಿರ್ಧಾರ ತೆಗೆದುಕೊಂಡಿತ್ತು. ಹೀಗಾಗಿ ವಿದ್ಯಾರ್ಥಿಗಳು ಮತ್ತೆ ಪುಸ್ತಕದತ್ತ ಮುಖ ಮಾಡುವುದನ್ನ ಬಿಟ್ಟಿದ್ದರು. ಈಗ ಮತ್ತೆ ಇಂತಹದೊಂದು ಕ್ರಮಕ್ಕೆ ಮುಂದಾಗಿದ್ದು, ತೀವ್ರ ಗೊಂದಲಕ್ಕೆ ಕಾರಣವಾಗಲಿದೆ.

ಈ ಬಗ್ಗೆ ಧಾರವಾಡ ಪಿಯು ಬೋರ್ಡಿನ ನಿರ್ದೇಶಕರು ಮಾತನಾಡಿ, ಇಂತಹದ್ದರ ಬಗ್ಗೆ ಇನ್ನೂ ಖಚಿತವಾದ ಆದೇಶ ಬಂದಿಲ್ಲ. ಹಾಗೇ ಬಂದರೇ, ಮಾದರಿ ಪ್ರಶ್ನೆಪತ್ರಿಕೆಗಳಿಗೆ ವಿದ್ಯಾರ್ಥಿಗಳಿಂದ ಉತ್ತರ ಪಡೆಯಬೇಕಾಗತ್ತೆ ಎಂದು ಹೇಳುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *