Posts Slider

Karnataka Voice

Latest Kannada News

ಪೊಲೀಸ್ ಕಮೀಷನರ್ ಲಾಬುರಾಮ್ ಚಾರ್ಜ್…! ಹೆಂಡತಿ ಐಡಿ ಕಾರ್ಡ್ ಬಳಕೆ ಮಾಡಿದ್ದ ಗಂಡನಿಗೆ ತಪರಾಕಿ…!

Spread the love

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಲಾಕ್ ಡೌನ್ ಆರಂಭವಾಗುತ್ತಿದ್ದ ಹಾಗೇ ಸ್ವತಃ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬುರಾಮ್ ಅವರು ಪೀಲ್ಡಿಗೆ ಇಳಿದಿದ್ದು, ಹೆಂಡತಿಯ ಕಚೇರಿ ಐಡಿ ಕಾರ್ಡನ್ನ ಬಳಕೆ ಮಾಡಿಕೊಂಡು ಅಲೆದಾಡುತ್ತಿದ್ದ ಪತಿ ಮಹಾಶಯನಿಗೆ ಕೇಸ್ ಹಾಕಿದ ಘಟನೆ ಕೇಶ್ವಾಪುರ ವೃತ್ತದಲ್ಲಿ ನಡೆಯಿತು.

ವೀಡಿಯೋ ಇಲ್ಲಿದೆ ನೋಡಿ..

ಹಲವು ಪೊಲೀಸರನ್ನ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ವ್ಯಕ್ತಿಯನ್ನ ತಪಾಸಣೆ ಮಾಡಿದ ವೇಳೆಯಲ್ಲಿ ಪತ್ನಿ ಕೆಲಸ ಮಾಡುವ ಕಚೇರಿಯ ಐಡಿ ಕಾರ್ಡ್ ಲಭಿಸಿದೆ. ಅಷ್ಟೇ ಅಲ್ಲ, ಇನ್ನೋಬ್ಬ ತನ್ನ ಸಹೋದರನ ಕಾರ್ಡನ್ನ ಬಳಕೆ ಮಾಡಿಕೊಂಡು ಅಲೆದಾಡುತ್ತಿದ್ದನ್ನ ಕೂಡಾ ಪತ್ತೆ ಹಚ್ಚಲಾಗಿದೆ.

ಈ ಬಗ್ಗೆ ಮಾತನಾಡಿದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಅವಳಿನಗರದಲ್ಲಿ ಕಟ್ಟುನಿಟ್ಟಿನ ಕ್ರಮವನ್ನ ಜರುಗಿಸಲಾಗಿದೆ. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡಲು ಬಿಡುವುದಿಲ್ಲ. ಸಾರ್ವಜನಿಕರು ಕೂಡಾ ಸಹಕರಿಬೇಕೆಂದು ಹೇಳಿದರು.


Spread the love

Leave a Reply

Your email address will not be published. Required fields are marked *