Posts Slider

Karnataka Voice

Latest Kannada News

ಕಲಘಟಗಿಯ ಬಿ.ಗುಡಿಹಾಳ ಗ್ರಾಮದಲ್ಲಿ ಕಂಡು ಬಂದ ಹುಲಿರಾಯ…!

Spread the love

ಕಲಘಟಗಿ: ತಾಲೂಕಿನ ಬಿ.ಗುಡಿಹಾಳ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಕಂಡು ಬಂದಿದ್ದು, ಗ್ರಾಮಸ್ಥರೆಲ್ಲರೂ ಹೌಹಾರಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ದೂರನ್ನ ನೀಡಿದ್ದಾರೆ.

ಬಾಣಗತ್ತಿ ಗುಡಿಹಾಳ ಗ್ರಾಮದ ಹೊರವಲಯದಲ್ಲಿರುವ ಬನಶ್ರೀ ಪೆಟ್ರೋಲ್ ಬಂಕಿನ ಸಿಸಿಟಿವಿ ಕ್ಯಾಮರಾದಲ್ಲಿ ಹುಲಿಯೊಂದು ಸಾವಕಾಶವಾಗಿ ಬಂದು, ಸಂಗ್ರಹವಾಗಿದ್ದ ನೀರನ್ನ ಕುಡಿದು ಹೋಗುವ ದೃಶ್ಯ ಸೆರೆಯಾಗಿದೆ.

ಶುಕ್ರವಾರ ರಾತ್ರಿ 10:38 ರ ಸುಮಾರಿಗೆ ಬಂದು ಹೋಗುವ ದೃಶ್ಯ ಸೆರೆಯಾಗಿದ್ದನ್ನ ಪೆಟ್ರೋಲ್ ಬಂಕ್ ಮಾಲೀಕರು ಪತ್ತೆ ಹಚ್ಚಿದ್ದು, ತಕ್ಷಣವೇ ಇಲಾಖೆಗೆ ಮಾಹಿತಿಯನ್ನ ನೀಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಹುಲಿ ಇರುವಿಕೆಯ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *