ವರ್ಗಾವಣೆಗಾಗಿ ಸುಗ್ರೀವಾಜ್ಞೆ ಹೊರಡಿಸುವುದೇ ಆದಲ್ಲಿ ಆರು ಬೇಡಿಕೆ ಪರಿಗಣಿಸಲು ಒತ್ತಾಯಿಸಿದ ಗ್ರಾಮೀಣ ಶಿಕ್ಷಕರ ಸಂಘ
1 min readಧಾರವಾಡ: ಶಿಕ್ಷಕರ ವರ್ಗಾವಣೆಯ ಬಗ್ಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮ ಶಾಲಾ ಶಿಕ್ಷಕರ ಸಂಘ ಖಡಕ್ಕಾಗಿ ಪತ್ರವೊಂದನ್ನ ಬರೆದು, ಸರಕಾರಕ್ಕೆ ಪತ್ರಗಳನ್ನ ಮನವಿ ಮಾಡಿಕೊಂಡಿದ್ದಾರೆ.
ಮನವಿ ಮಾಡಿಕೊಂಡ ವೀಡಿಯೋ ಇಲ್ಲಿದೆ..
ವಿಷಯ.. ಶಾಲೆಗಳು ಪ್ರಾರಂಭವಾಗುವುದರೊಳಗಾಗಿ ವರ್ಗಾವಣೆ ಪ್ರಕ್ರಿಯೆ ಮುಗಿಸಲು..ಮುಖ್ಯ ಮಂತ್ರಿಗಳಿಗೆ.. ಗ್ರಾಮೀಣ ಶಿಕ್ಷಕರ ಸಂಘ ಆಗ್ರಹ
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮ ಶಾಲಾ ಶಿಕ್ಷಕರ ಸಂಘ.ರಾಜ್ಯ ಘಟಕ ಹುಬ್ಬಳ್ಳಿಯ ವತಿಯಿಂದ ಶಿಕ್ಷಕರ ವರ್ಗಾವಣೆ ಆರಂಭಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಶಿಕ್ಷಕರ ವರ್ಗಾವಣೆ ಆರಂಭವಾಗುತ್ತಿಲ್ಲ ಐದು ವರ್ಷಗಳಲ್ಲಿ ಒಂದು ಬಾರಿ ಮಾತ್ರ ಶಿಕ್ಷಕರ ವರ್ಗಾವಣೆ ನಡೆದಿದೆ.ಐದು ತಿಂಗಳ ಹಿಂದೆ ಪ್ರಾರಂಭಗೊಂಡ ಪ್ರಕ್ರಿಯೆ ಕೆ.ಎ.ಟಿ.ಯಲ್ಲಿ ಅರ್ಜಿ ಇದ್ದ ಪ್ರಯುಕ್ತ ಸ್ಥಗಿತವಾಗಿತ್ತು.ಆದರೆ ಈಗ ಗೌರವಾನ್ವಿತ ಕೆ.ಎ.ಟಿ ಹಾಗೂ ಉಚ್ಛ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ.ಆದರೆ ಈ ತನಕ ವರ್ಗಾವಣೆ ಪ್ರಕ್ರಿಯೆ ನಿಂತ ಕಾರಣ 72000 ಅರ್ಜಿ ಹಾಕಿದ ಪರಸ್ಪರ ಹಾಗೂ ಕೋರಿಕೆ ವರ್ಗಾವಣೆ ಅಪೇಕ್ಷಿತರು ಸಂಕಷ್ಟ ತೊಳಲಾಟಗಳಿಂದ ಕಣ್ಣೀರಿಡುತ್ತಿದ್ದಾರೆ.ಅರ್ಜಿ ಹಾಕಿದ ತೀವ್ರ ತರ ಕಾಯಿಲೆಯವರಲ್ಲಿ ಕೆಲವರು ಮೃತಪಟ್ಟಿದ್ದಾರೆ.ಈ ಎಲ್ಲ ಅಂಶಗಳನ್ನು ಪರಿಗಣಿಸಿ ತತ್ ಕ್ಷಣ ವರ್ಗಾವಣೆ ಪ್ರಾರಂಭಿಸಲು ನಮ್ಮ ಸಂಘ ಆಗ್ರಹಿಸುತ್ತದೆ.ತತಕ್ಷಣ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲು ವಿನಮ್ರವಾಗಿ ವಿನಂತಿಸುತ್ತೇವೆ.ಇಲ್ಲವಾದಲ್ಲಿ ನಿರಂತರ ಚಳುವಳಿ ಉಪವಾಸ ಸತ್ಯಾಗ್ರಹ ಆಮರಣಾಂತ ಉಪವಾಸ ಹಾಗೂ ಬೀದಿಗಿಳಿದು ಹೋರಾಟ ಮಾಡಬಹುದಾದ ಸಂದರ್ಭ ಒದಗಿಬರಬಹುದು. ಆದ್ದರಿಂದ ತಾವುಗಳು ಇದಕ್ಕೆ ಅವಕಾಶ ಕೊಡದೆ
ಶಿಕ್ಷಕರ ಮೇಲೆ ಕರುಣೆ ದಯೆ ತೋರಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಿ ಶಾಲೆ ಪ್ರಾರಂಭವಾಗುವುದರೊಳಗಾಗಿ ಮುಗಿಯುವ ತುಂಬು ಭರವಸೆ ಹೊಂದಿದ್ದೇವೆ ಎಂದು ಮುಖ್ಯ ಮಂತ್ರಿಗಳಿಗೆ ಶಿಕ್ಷಣ ಸಚಿವರಿಗೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ.ರಾಜ್ಯ ಪ್ರ.ಕಾ.ಮಲ್ಲಿಕಾರ್ಜುನ ಸಿ.ಉಪ್ಪಿನ ಗೌರವಾಧ್ಯಕ್ಷರಾದ ಎಲ್ ಆಯ್ ಲಕ್ಕಮ್ಮನವರ ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ ಮಹಾ ಪೋಷಕರಾದ ಪವಾಡೆಪ್ಪ ಕಾಂಬಳೆ ಕೋಶಾಧ್ಯಕ್ಷರಾದ ಎಸ್.ಎಫ್.ಪಾಟೀಲ ರಾಜ್ಯ ಸಂಚಾಲಕರಾದ ಹನುಮಂತಪ್ಪ ಮೇಟಿ ರಾಮಪ್ಪ ಹಂಡಿ ಉಪಾಧ್ಯಕ್ಷರಾದ ಎಮ್.ಆಯ್.ಮುನವಳ್ಳಿ ನಾಗರಾಜು ಕೆ. ಎಮ್.ವಿ.ಕುಸುಮಾ ರಾಜಶ್ರೀ ಪ್ರಭಾಕರ. ಅಕ್ಕಮಹಾದೇವಿ.ನೂಲ್ವಿ. ಲಕ್ಷ್ಮಿದೇವಮ್ಮ ಮಹ್ಮದ ರಫಿ.ಸುರೇಶ.ಅರಳಿ.ಗೋವಿಂದ ಜುಜಾರೆ.ಹೇಮಾ ಕಂಪ್ಲಿ.ವಿಜಯಲಕ್ಷ್ಮಿ ಶಿಡ್ಲಘಟ್ಟ ಅರ್.ಎಮ್.ಕುರ್ಲಿ.ಶರಣಬಸವ ಬನ್ನಿಗೋಳ ಆರ್.ಎಮ್.ಕಮ್ಮಾರ ನಾಗರಾಜ ಆತಡಕರ ಎಸ್.ಸಿ. ಬಸನಗೌಡರ. ಎಸ್.ಸಿ.ಕಾಮನಳ್ಳಿ ಸುನಿಲಗೌಡ್ರ ಪೀರಸಾಬ ನದಾಫ ಬಸವರಾಜ ಹೊನ್ನಳ್ಳಿ .ಅಕ್ಬರಲಿ ಇ ಸೊಲ್ಲಾಪೂರ ಮುಂತಾದವರು ಮನವಿ ಮಾಡಿದ್ದಾರೆ
ಗೌರವಾನ್ವಿತ ವಂದನೆಗಳೊಂದಿಗೆ
ಪ್ರತಿಯನ್ನು ಗೌರವ ಪೂರ್ವಕ ಮಾಹಿತಿಗಾಗಿ
ಮಾನ್ಯಶ್ರೀ ಸುರೇಶಕುಮಾರ್ ರವರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರುಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು*
ಮಾನ್ಯ ಶ್ರೀ ಪಿ.ರವಿಕುಮಾರ್ ರವರು
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು
ಮಾನ್ಯ ಶ್ರೀ ಜಿ.ಕುಮಾರ್ ನಾಯಕರವರು
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಎಮ್.ಎಸ್.ಬಿಲ್ಡಿಂಗ್ ಬೆಂಗಳೂರು
ಮಾನ್ಯ ಶ್ರೀ ವಿ.ಅನ್ಬುಕುಮಾರರವರು
ಮಾನ್ಯ ಆಯುಕ್ತರು ಸಾ.ಶಿ.ಇ.ಬೆಂಗಳೂರ
ರಾಜ್ಯದ ಎಲ್ಲಾ ಸರ್ವಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರುಗಳು
ಕರ್ನಾಟಕ ಸರ್ಕಾರ
ಸಂಘದ ಕಚೇರಿ ಪ್ರತಿ