Posts Slider

Karnataka Voice

Latest Kannada News

ಯಮನೂರು ಬಳಿ ಲಾರಿ ಪಲ್ಟಿ- ಹುಬ್ಬಳ್ಳಿ ಸೊಲ್ಲಾಪುರ ರಸ್ತೆ ಕ್ಲೋಸ್…!

Spread the love

ನವಲಗುಂದ: ವೇಗವಾಗಿ ಬರುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಯಮನೂರು ಹಳ್ಳದ ಬಳಿ ರಸ್ತೆಯಲ್ಲಿಯೇ ಪಲ್ಟಿಯಾದ ಪರಿಣಾಮ, ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ಸಂಪೂರ್ಣವಾಗಿ ಬಂದಾದ ಘಟನೆ ನಡೆದಿದೆ.

ನವಲಗುಂದ ಕಡೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಲಾರಿಯ ಚಾಲಕನಿಗೆ ಮುಂದಿನ ವಾಹನದ ಪ್ರಕರವಾದ ಬೆಳಕು, ಕಣ್ಣಿಗೆ ಬಿದ್ದ ಪರಿಣಾಮ, ನಿಯಂತ್ರಣ ತಪ್ಪಿ ಲಾರಿಯನ್ನೇ ಪಲ್ಟಿ ಮಾಡಿದ್ದಾನೆ.

ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಆದರೆ. ಲಾರಿಯು ರಸ್ತೆಯ ಮಧ್ಯದಲ್ಲೇ ಬೇರೆ ವಾಹನಗಳು ಹೋಗದ ಹಾಗೇ ಬಿದ್ದಿರುವ ಪರಿಣಾಮ, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ನವಲಗುಂದ ಠಾಣೆಯ ಪೊಲೀಸರು, ವಾಹನವನ್ನ ಸ್ಥಳಾಂತರ ಮಾಡಲು ಮುಂದಾಗಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲು ಸಾಲಾಗಿ ನಿಂತಿವೆ.


Spread the love

Leave a Reply

Your email address will not be published. Required fields are marked *