ಏ.. ಬುಲ್ ಬುಲ್.. ಮಾತಾಡಾಕಿಲ್ವಾ… ಅಂದವರಿಗೆ ಕಲಘಟಗಿ ಠಾಣೆ ಪೊಲೀಸರೇನು ಮಾಡಿದ್ದಾರೆ ಗೊತ್ತಾ…!

ಕಲಘಟಗಿ: ಪಟ್ಟಣದ ಜೆ.ಇ.ಕಾಲೇಜ್ ಹಾಗೂ ಗುಡ್ ನ್ಯೂಸ್ ಕಾಲೇಜು ಹಾಗೂ ದಾಸ್ತಿಕೊಪ್ಪದ ಬಳಿಯಿರುವ ಪದವಿ ಕಾಲೇಜುಗಳಿಗೆ ಹೋಗುತ್ತಿದ್ದ ಹುಡುಗಿಯರನ್ನ ಚುಡಾಯಿಸುತ್ತಿದ್ದ 12 ಯುವಕರನ್ನ ಕಲಘಟಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಲೇಜುಗಳಿಗೆ ಹೋಗುತ್ತಿದ್ದ ಹುಡುಗಿಯರನ್ನ ನೋಡಿ ಅಶ್ಲೀಲವಾಗಿ ಹಾಡು ಹಾಡುತ್ತ, ಕೈಸನ್ನೆ ಮಾಡಿ ಚುಡಾಯಿಸುತ್ತಿದ್ದ ಪೋಕರಿಗಳನ್ನ ಬಂಧನ ಮಾಡಿ ಕಾನೂನು ಕ್ರಮವನ್ನ ಜರುಗಿಸಲಾಗಿದೆ.
ಬಂಧಿತರನ್ನ ಅಭಿಷೇಕ ಪವಾರ, ಯುವರಾಜ ಪಲ್ಲೇದ, ಪಾಪು ಲಮಾಣಿ, ಶಂಕರ ಲಮಾಣಿ, ರವಿ ಲಮಾಣಿ, ಹನಮಂತ ಲಮಾಣಿ, ಸಂಜು ಲಮಾಣಿ, ರಾಜು ಲಮಾಣಿ, ಶ್ರೀಕಾಂತ ಇಗಡೆ, ಪ್ರೇಮ ಬೋಜ, ಅನಿಲ ಹೊಸೂರ ಹಾಗೂ ಕಾರ್ತಿಕ ಸಂಕನಕೊಪ್ಪ ಎಂಬುವವರನ್ನ ಬಂಧನ ಮಾಡಲಾಗಿದೆ.
ಕಲಘಟಗಿ ಠಾಣೆ ಇನ್ಸೆಪೆಕ್ಟರ್ ಪ್ರಭು ಸೂರಿನ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.