Posts Slider

Karnataka Voice

Latest Kannada News

ಸಿಡಿ ಲೇಡಿಗೆ ಕೋರ್ಟಗೆ ಹಾಜರಾಗಲು ಅನುಮತಿ…!

1 min read
Spread the love

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ಸಿಕ್ಕಿದೆ.

ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟಿನ ಉಪರಿಜಿಸ್ಟಾರ್ ಅವರಿಗೆ ಅರ್ಜಿ ಸಲ್ಲಿಸಿದ್ದ ಯುವತಿಯ ಪರವಾದ ವಕೀಲ ಜಗದೀಶ ಅವರು, ‘ಬೆಂಗಳೂರು ಹೊರವಲಯದಲ್ಲಿ ಯುವತಿ ಇದ್ದಾರೆ. ನ್ಯಾಯಾಧೀಶರ ಮುಂದೆ ಸ್ವ ಇಚ್ಚಾ ಹೇಳಿಕೆ ನೀಡಲು ಬಯಸಿದ್ದಾರೆ. ಅನುಮತಿ ನೀಡಿ’ ಎಂದು ಕೋರಿದ್ದರು.

ಇದೀಗ ನ್ಯಾಯಾಲಯಕ್ಕೆ  ಸಿಡಿಲೇಡಿ ಹಾಜರಾಗಿ ಹೇಳಿಕೆ ನೀಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಯುವತಿ ನ್ಯಾಯಾಲಯದಲ್ಲಿ ಹೇಳುವ ವಿಚಾರದತ್ತ ನೆಟ್ಟಿದೆ.

ಇಂದಷ್ಟೇ ಯುವತಿಯ ಪಾಲಕರು, ನ್ಯಾಯಾಲಯಕ್ಕೆ ಹೇಳಿಕೆ ಕೊಡುವ ಮುನ್ನ ನಮ್ಮ ಜೊತೆ ಎರಡ್ಮೂರು ದಿನ ಕಳೆಯಲಿ ಎಂದು ಕೇಳಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *

You may have missed