ಚೈತ್ರಾ ಕೋಟೂರ ಬೆಳಿಗ್ಗೆ ಮದುವೆ: ಈಗ ಪೊಲೀಸ್ ಠಾಣೆಯಲ್ಲಿ…!
1 min readಕೋಲಾರ: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಬೆಳ್ಳಿಗ್ಗೆ ಮದುವೆ.
ಸಂಜೆ ವೇಳೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ.
ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಮದುವೆ ವಿವಾದ.
ಇಂದು ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇಗುಲದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಚೈತ್ರಾ ಕೊಟ್ಟೂರು.
ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದ ಕೋಲಾರ ಮೂಲದ ಚೈತ್ರಾ ಕೊಟ್ಟೂರು.
ಮಂಡ್ಯ ಮೂಲದ ನಾಗಾರ್ಜುನ್ ಜೊತೆಗೆ ಮದುವೆಯಾಗಿದ್ದ ಚೈತ್ರಾ.
ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲ.
ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ ರನ್ನ ಕೂಡಿ ಹಾಕಿ ದೇಗುಲದಲ್ಲಿ ಮದುವೆ.
ಸಂಘಟನೆಗಳ ಬೆದರಿಕೆಗೆ ಬಗ್ಗಿದ ನಾಗಾರ್ಜುನ್ ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದ.
ನಾಗಾರ್ಜುನ್ ಸೇರಿ ಮನೆಯವರಿಗೆ ಚೈತ್ರಾ ಜೊತೆ ಮದುವೆ ಇಷ್ಟವಿರಲಿಲ್ಲ.
ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದು ತಗಾದೆ ತೆಗೆದ ನಾಗಾರ್ಜುನ್ ಕುಟುಂಬದವರು.
ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಾಗಾರ್ಜುನ್ ಕುಟುಂಬದವರು.
ಪೊಲೀಸ್ ಠಾಣೆಗೆ ಆಗಮಿಸಿರುವ ಚೈತ್ರಾ ಕೊಟ್ಟೂರು, ನಾಗಾರ್ಜುನ್.
ಚೈತ್ರಾ ಜೊತೆ ಮದುವೆ ಇಷ್ಟವಿಲ್ಲ ಅಂತಾ ಪಟ್ಟು ಹಿಡಿದಿರುವ ನಾಗಾರ್ಜುನ್.
ನನಗೆ ನಾಗಾರ್ಜುನ್ ಇಷ್ಟ, ಅವನ ಜೊತೆ ಹೋಗುವೆ ಅಂತ ಬಿಗಿಪಟ್ಟು ಹಿಡಿದಿರುವ ಚೈತ್ರಾ.
ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿಚಾರಣೆ.
ಬುಧವಾರದ ವರೆಗೆ ಸಮಯ ಕೊಟ್ಟು ಕಳುಹಿಸಿದ ಪೊಲೀಸರು.
ಎರಡು ಕುಟುಂಬದವರು ಕುಳಿತು ಮಾತಾಡಿಕೊಂಡು ತೀರ್ಮಾನ ಮಾಡುವಂತೆ ಸೂಚಿಸಿರುವ ಪೊಲೀಸರು.
ಸಧ್ಯ ಕೋಲಾರದ ಮನೆಯಲ್ಲಿ ಚೈತ್ರಾ, ಮಂಡ್ಯದ ಪೋಷಕರ ಜೊತೆ ತೆರಳಿರುವ ನಾಗರ್ಜುನ್.