ಹಳ್ಳಿಕೇರಿ ಗ್ರಾಮದಲ್ಲಿ ಯುವ ರೈತ ಆತ್ಮಹತ್ಯೆ…!
1 min readಅಣ್ಣಿಗೇರಿ: ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಯುವ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದ್ದು, ಸರಿಯಾಗಿ ಬೆಳೆ ಬಾರದಿರುವುದೇ ಸಾವಿಗೆ ಕಾರಣವೆಂದು ಪ್ರಕರಣ ದಾಖಲಾಗಿದೆ.
ಜಗದೀಶ ಕೊಟ್ರಗೌಡ ಪಾಟೀಲ ಎಂಬ 29 ವರ್ಷದ ಯುವಕನೇ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷ ಸೇವಿಸಿದ್ದ. ಆದರೆ, ವಿಷ ಸೇವಿಸಿದ ನಂತರ ಜೋರಾಗಿ ಚೀರಿಕೊಂಡಿದ್ದರಿಂದ ಪಕ್ಕದ ಮನೆಯವರಿಗೆ ಗೊತ್ತಾಗಿ, ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಮತ್ತೆ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿತ್ತು.
ಆದರೆ, ಯುವ ರೈತ ಸೇವಿಸಿದ್ದ ವಿಷ ದೇಹದಲ್ಲಿ ಹೆಚ್ಚು ಹರಡಿದ್ದರಿಂದ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ. ಕೆವಿಜಿ ಬ್ಯಾಂಕಿನಲ್ಲಿ 2ಲಕ್ಷ ಬೆಳೆಸಾಲ ಹಾಗೂ ಗ್ರಾಮದಲ್ಲಿ ಹಲವರ ಬಳಿ ಕೈಸಾಲ ಇಸಿದುಕೊಂಡಿದ್ದ ಯುವ ರೈತ, ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ಹತ್ತಿ ಮತ್ತು ಮೆಣಸಿನಕಾಯಿ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಇಂತಹದಕ್ಕೆ ಮುಂದಾಗಿದ್ದಾರೆಂದು ಹೇಳಲಾಗಿದೆ.
ಘಟನೆಯ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಅಣ್ಣಿಗೇರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.